ETV Bharat / state

ವಿಜಯಪುರ : ಕೊರೊನಾ ಲಸಿಕೆ ಹಾಕಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ನಗರ ಮತ್ತು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಗಂಟಲು ದ್ರವ ಮಾದರಿ ಪಡೆಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಒಂದೇ ಕಡೆ ಆಗುವಂತಹ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿ, ಕಳೆದ 15 ದಿನಗಳಲ್ಲಿ RT-PCR ಗಂಟಲು ದ್ರವ ಮಾದರಿ ಸಂಗ್ರಹಣೆಯಲ್ಲಿ ಶೇ.120ರಷ್ಟು ಸಾಧನೆ ಮಾಡಲಾಗಿದೆ..

Preparation for kovid vaccination in vijaypur
ಕೊರೊನಾ ಲಸಿಕೆ ಹಾಕಲು ಜಿಲ್ಲಾಡಳಿತದಿಂದ ಸಿದ್ದತೆ
author img

By

Published : Jan 9, 2021, 7:49 PM IST

ವಿಜಯಪುರ : ಜಿಲ್ಲೆಯ 15,318 ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-19 ಲಸಿಕೆಯ ಪೂರ್ವಾಭ್ಯಾಸ ಶಾಂತಿಯುತ ಮತ್ತು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್​ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಖಾಸಗಿ 8910 ಹಾಗೂ ಸರ್ಕಾರಿ 6408 ಸೇರಿದಂತೆ ಒಟ್ಟು 15,318 ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ನೀಡಲು ಉದ್ದೇಶಿಸಲಾಗಿರುವ ಕೋವಿಡ್-19 ಲಸಿಕೆ ಪೂರ್ವಾಭ್ಯಾಸ ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ.

97 ಕೋಲ್ಡ್‌ಚೈನ್, ಪಾಯಿಂಟ್ಸ್‌ ಗುರುತಿಸಲಾಗಿದೆ. 10 AEFI ಮ್ಯಾನೇಜ್ಮೆಂಟ್ ಕೇಂದ್ರಗಳನ್ನು ಸಹ ಗೊತ್ತುಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ 113 ಲಸಿಕಾ ಸ್ಥಳಗಳನ್ನು ಗುರುತಿಸಲಾಗಿದೆ.

ಪ್ರತಿ ಲಸಿಕಾ ಕೇಂದ್ರದಲ್ಲಿ ಚುನಾವಣೆ ಮಾದರಿ 5 ಸಿಬ್ಬಂದಿ, ಕೋ-ವಿನ್ ತಂತ್ರಾಂಶದಲ್ಲಿ ನೋಂದಣಿ, ಲಸಿಕೆ ನಂತರದಲ್ಲಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅಬ್ಸರ್ವೇಷನ್ ಕೊಠಡಿ ಸ್ಥಾಪಿಸಿ ಪರಿಶೀಲನೆ ಮತ್ತು ಮುಂದಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪೂರ್ವಾಭ್ಯಾಸ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ಹಂತ-2 ಮತ್ತು ಹಂತ-3ರಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಸರ್ಕಾರದ ನಿಯಮ ಮತ್ತು ನಿರ್ದೇಶನಗಳ ಅನ್ವಯ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ಲಸಿಕೆ ಲಭ್ಯವಾದ ತಕ್ಷಣ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ನಗರ ಮತ್ತು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಗಂಟಲು ದ್ರವ ಮಾದರಿ ಪಡೆಯುವ ವ್ಯವಸ್ಥೆ ಕಲ್ಪಿಸುವ ಮೂಲಕ ಒಂದೇ ಕಡೆ ಆಗುವಂತಹ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿ, ಕಳೆದ 15 ದಿನಗಳಲ್ಲಿ RT-PCR ಗಂಟಲು ದ್ರವ ಮಾದರಿ ಸಂಗ್ರಹಣೆಯಲ್ಲಿ ಶೇ.120ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ರು.

ಸಂತ್ರಸ್ತರಿಗೆ ಪರಿಹಾರ ಧನ ವಿತರಣೆ : ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಜೀವ ಹಾನಿಯಾದ 14 ಜನ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಜಾನುವಾರು ಸಾವು-ನೋವು ಹಾಗೂ ಮನೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ವಿತರಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ತೊಗರಿ ಖರೀದಿ ಕೇಂದ್ರಗಳ ವ್ಯವಸ್ಥೆ : ಜಿಲ್ಲೆಯಲ್ಲಿ 165 ತೊಗರಿ ಖರೀದಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. 66,332 ರೈತರ ನೋಂದಣಿ ಮಾಡಲಾಗಿದೆ ಎಂದು ತಿಳಿಸಿದ್ರು.

ಕೋಳಿ ಆಮದಿನ ಮೇಲೆ ತೀವ್ರ ನಿಗಾ : ಕೇರಳದಲ್ಲಿ ಹಕ್ಕಿಜ್ವರ ಕಂಡು ಬಂದಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮಹಾರಾಷ್ಟ್ರದಿಂದ ಜಿಲ್ಲೆಗೆ ಆಮದು ಆಗಬಹುದಾದ ಕೋಳಿ ಉತ್ಪನ್ನಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ತಂಡಗಳನ್ನು ಸಹ ರಚಿಸಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ RRT "ರಾಪಿಡ್ ರೆಸ್ಪಾನ್ಸ್ ಟೀಮ್" ಸನ್ನದುಗೊಳಿಸಿ ತರಬೇತಿ ನೀಡಲಾಗಿದೆ.

ವಲಸೆ ಪಕ್ಷಿಗಳ ಜಲಸಂಪನ್ಮೂಲಗಳ ಸ್ಥಳ, ವ್ಯಾಪ್ತಿಯಲ್ಲಿ ಪಕ್ಷಿಗಳ ಸಾವು, ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಯಾವುದೇ ಪ್ರಕರಣ ಈವರೆಗೆ ಕಂಡು ಬಂದಿಲ್ಲ. ಪ್ರತಿದಿನ ತೀವ್ರ ನಿಗಾ ಇಡಲಾಗಿದೆ ಎಂದು ಅವರು ಹೇಳಿದರು.

ವಿಜಯಪುರ ನಗರದ ರಸ್ತೆ ಸುಧಾರಣೆಗೆ ಕ್ರಮ : ವಿಜಯಪುರ ನಗರದ ರಸ್ತೆ ಸುಧಾರಣೆ ಕೈಗೊಳ್ಳಲಾಗಿದೆ. ನಗರದ 9 ಕೆಟ್ಟಿರುವ ರಸ್ತೆಗಳ ಗುಂಡಿ ಮುಚ್ಚಿ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ನಗರ ವಿಕಾಸ ಯೋಜನೆ ಅಡಿ 45 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.

15 ಕೋಟಿ ರೂ.ಗಳ ಕಾಮಗಾರಿ ಟೆಂಡರ್ ಕರೆಯಲಾಗಿದೆ. ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಿದೆ. 14ನೇ ಹಣಕಾಸು ಯೋಜನೆಯಡಿಯ ಅಂದಾಜು 8 ಕೋಟಿ ರೂ.ಗಳ ಅನುದಾನ ನ್ಯಾಯಾಲಯ ನಿರ್ದೇಶನದ ಅನ್ವಯ ಬ್ಲಾಕ್ ಆಗಿದ್ದು, ಇದರ ಕ್ಲಿಯರೆನ್ಸ್​​ಗೆ ನ್ಯಾಯಾಲಯ ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

ಇನ್ನು, ಜಿಲ್ಲೆಯ ಬುರಣಾಪುರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ಭೂಮಿಪೂಜೆ ಕುರಿತು ಮುಖ್ಯಮಂತ್ರಿಗಳಿಂದ ದಿನಾಂಕ ನಿಗದಿಯ ಬಗ್ಗೆ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದರು.

ಇದನ್ನೂ ಓದಿ:ರಾಜ್ಯ ಸರ್ಕಾರ ನಿಂತಿರೋದು ಶೇ.30ರಷ್ಟು ಕಮಿಷನ್ ಮೇಲೆ : ಸಲೀಂ ಅಹ್ಮದ್ ಆರೋಪ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.