ವಿಜಯಪುರ : ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ರಭಸವಾಗಿ ಹರಿಯುವ ಕಾಲುವೆಯ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವನನ್ನು ರಕ್ಷಿಸಿದ ಘಟನೆ ಇಂದು ನಡೆದಿದೆ. ನಿಡಗುಂದಿಯ ನಿವಾಸಿ ಬಸವರಾಜ ಧನಶೆಟ್ಟಿ ಎನ್ನುವ ವ್ಯಕ್ತಿಯು ಕುಡಿದ ಮತ್ತಿನಲ್ಲಿ ನಿಡಗುಂದಿ ತಾಂಡೆಯ ಬಳಿಯಿರುವ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಕಾಲುಜಾರಿ ಬಿದ್ದಿದ್ದಾನೆ.
ಇದನ್ನೂ ಓದಿ: ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಡಿಕ್ಕಿ : ಮೂವರು ಮಹಿಳೆಯರು ಸಾವು, ಮಗು ಗಂಭೀರ
ಇದೇ ವೇಳೆ ನಿಡಗುಂದಿ ಪೊಲೀಸ್ ಠಾಣೆಯ ಸಿಬ್ಬಂದಿ ಎಸ್.ಎಸ್. ಅಂಗಡಗೇರಿ ಕಾಲುವೆ ಪಕ್ಕದ ರಸ್ತೆಯಲ್ಲಿ ಹಾದು ಹೋಗುವ ವೇಳೆ ನೀರಿನಲ್ಲಿ ವ್ಯಕ್ತಿ ಮುಳುಗುತ್ತಿರುವುದನ್ನು ಗಮನಿಸಿ ಬೇರೆಯವರ ಸಹಾಯ ಪಡೆದು ನೀರಿನಿಂದ ಮೇಲೆತ್ತಿ ವ್ಯಕ್ತಿಯನ್ನು ರಕ್ಷಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.