ETV Bharat / state

ಸಿದ್ದರಾಮಯ್ಯಗೆ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು ಎಂದಿದ್ದ ಕಾನ್ಸ್​ಟೇಬಲ್ ಅಮಾನತು - ಈಟಿವಿ ಭಾರತ ಕನ್ನಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದ ಸಂಬಂಧ ಪೊಲೀಸ್ ಕಾನ್ಸ್​ಟೇಬಲ್ ಅಮಾನತು‌ಗೊಳಿಸಲಾಗಿದೆ.

police-constable-suspended-over-post-against-siddaramaiah
ಸಿದ್ದರಾಮಯ್ಯಗೆ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ಎಂದಿದ್ದ ಕಾನ್ಸ್​ಟೇಬಲ್ ಅಮಾನತು
author img

By

Published : Oct 8, 2022, 10:30 PM IST

Updated : Oct 8, 2022, 10:54 PM IST

ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ವಿಚಾರ ಸಂಬಂಧ ಪೊಲೀಸ್ ಕಾನ್ಸ್​ಟೇಬಲ್ ಅಮಾನತು‌ಗೊಳಿಸಲಾಗಿದೆ. ವಿಜಯಪುರ ಗ್ರಾಮಾಂತರ ಠಾಣೆ ಕಾನ್ಸ್​​ಟೇಬಲ್ ರಾಜಶೇಖರ ಖಾನಾಪುರ ಅವರನ್ನು ಅಮಾನತುಗೊಳಿಸಿ ಎಸ್​​ಪಿ ಆನಂದಕುಮಾರ ಆದೇಶಿಸಿದ್ದಾರೆ.

'ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು' ಎಂದು ಕಾನ್ಸ್​ಟೇಬಲ್ ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾನ್ಸಟೇಬಲ್ ರಾಜಶೇಖರ ಖಾನಾಪುರ ಅಮಾನತುಗೊಳಿಸಲಾಗಿದೆ.

police-constable-suspended-over-post-against-siddaramaiah
ಕ್ರಮಕ್ಕೆ ಆಗ್ರಹಿಸಿದ್ದ ಪತ್ರ

ಪೋಸ್ಟ್​ ಬೆನ್ನಲ್ಲೇ ಕಾನ್ಸ್​​ಟೇಬಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅಭಿಮಾನಿಗಳು ಆಗ್ರಹಿಸಿದ್ದರು. ಇದೀಗ ಕಾನ್ಸ್​ಟೇಬಲ್ ಅಮಾನತು ಮಾಡಿ ವಿಜಯಪುರ ಎಸ್​ಪಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ: ಇಬ್ಬರು ಪಿಎಸ್ಐ ಸೇರಿ ಐವರು ಪೊಲೀಸರ ಅಮಾನತು

Last Updated : Oct 8, 2022, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.