ವಿಜಯಪುರ: ಕೊರೊನಾ ಹಿನ್ನೆಲೆ ಲಾಕ್ಡೌನ್ ಆದೇಶವನ್ನು ಧಿಕ್ಕರಿಸಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಟ ನಡೆಸುವ ಜನರ ಬೈಕ್‌ಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.
ನಗರದ ಗಾಂಧಿ ವೃತ್ತ, ಸ್ಟೇಷನ್ ರಸ್ತೆ, ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವು ಭಾಗಗಳಲ್ಲಿ ಪೊಲೀಸರು ಲಾಕ್ ಡೌನ್ ಜಾರಿಯಲ್ಲಿದ್ದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ರಸ್ತೆಯಲ್ಲಿ ಬೈಕ್ ಮೂಲಕ ತೆರಳುವ ಜನರ ಬೈಕ್‌ಗಳನ್ನು ಈಗಾಗಲೇ ಸೀಜ್ ಮಾಡುವ ಕಾರ್ಯವನ್ನು ನಗರದ ಪೊಲೀಸರು ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಎಸ್ಪಿ ಅನುಪಮ್ ಅಗರವಾಲ್ ಕಳೆದ ಮೂರು ದಿನಗಳಿಂದ ನಗರದಲ್ಲಿ ಯಾವುದೇ ಕಾರಣವಿಲ್ಲದೇ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವ ಬೈಕ್‌ಗಳನ್ನು ಪೊಲೀಸ್ ಇಲಾಖೆ ಸೀಜ್ ಮಾಡಲು ಮುಂದಾಗಿದೆ. ಇದುವರಿಗೂ 393 ಬೈಕ್ ಸೀಜ್ ಮಾಡಲಾಗಿದೆ. ಇದು ಲಾಕ್ ಡೌನ್ ಮುಗಿಯುವವರಿಗೂ ಮುಂದುವರಿಯಲಿದೆ. ಅನಗತ್ಯವಾಗಿ ಜನರು ಬೈಕ್ ಮೂಲಕ ರಸ್ತೆಗಳಲ್ಲಿ ಸಂಚಾರ ನೆಡದಂತೆ ಮನವಿ ಮಾಡಿಕೊಂಡರು.
ಇನ್ನು ಕೊರೊನಾ ಬಾದಿತ ಪ್ರದೇಶಗಳಿಗೆ ಪ್ಯಾರಾ ಮಿಲಿಟರಿ ಪಡೆ ಆಗಮಿಸಿದೆ ಜಿಲ್ಲೆಗೆ ಯಾವಾಗ ಬೇಕಾದ್ರೂ ಬರಬಹುದು. ಜನರು ಮನೆ ಬಿಟ್ಟು ಹೊರಗೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಮನವಿ ಮಾಡಿದರು.