ETV Bharat / state

ರಾಜಕೀಯ ನಾಯಕರ ಅತಿರೇಕದ ವರ್ತನೆಯನ್ನ ಜನರು ಸಹಿಸಲ್ಲ: ರಂಭಾಪುರಿ ಶ್ರೀ - ಜಾತಿ ಮತ್ತು ಧರ್ಮದ ವಿಚಾರ

ಜಾತಿ ಧರ್ಮಗಳ ಹೆಸರಿನಲ್ಲಿ ವಿಷ ಬೀಜ ಬಿತ್ತಬಾರದು - ರಾಜಕೀಯ ವ್ಯಕ್ತಿಗಳ ಅತಿರೇಕದ ವರ್ತನೆ ಸರಿಯಲ್ಲ - ಆಲಮಟ್ಟಿಯಲ್ಲಿ ರಂಭಾಪುರಿ ಶ್ರೀ ಹೇಳಿಕೆ

people-wont-tolerate-political-leaders-says-rambhapuri-swamiji
ರಾಜಕೀಯ ನಾಯಕರ ಅತಿರೇಕದ ವರ್ತನೆ ಜನರು ಸಹಿಸಲ್ಲ : ರಂಭಾಪುರಿ ಶ್ರೀ
author img

By

Published : Jan 19, 2023, 9:48 PM IST

ರಾಜಕೀಯ ನಾಯಕರ ಅತಿರೇಕದ ವರ್ತನೆ ಜನರು ಸಹಿಸಲ್ಲ : ರಂಭಾಪುರಿ ಶ್ರೀ

ವಿಜಯಪುರ : ಈ ವರ್ಷ ವಿಧಾನಸಭೆ ಚುನಾವಣೆ ಇದೆ. ಪಕ್ಷಗಳು ಜಾತಿ ಮತ್ತು ಧರ್ಮದ ವಿಚಾರದಲ್ಲಿ ಸಂಘರ್ಷ ಮಾಡುತ್ತಿರುವುದನ್ನು ಕಂಡು ಜನ ಬೇಸತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯಬಾರದು ಎಂದು ಬಾಳೆ ಹೊನ್ನೂರಿನ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರು ತಿಳಿಸಿದರು.

ಆಲಮಟ್ಟಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎರಡು ಸಮಾಜಗಳ ಸಂಘರ್ಷವು ಪ್ರಗತಿಗೆ ಅಡ್ಡಿಯಾಗುತ್ತದೆ.‌ ಇದಕ್ಕೆ ರಾಜಕೀಯ ಪಕ್ಷಗಳು ಪ್ರಚೋದನೆ ಕೊಡುವುದು ಒಳ್ಳೆಯದಲ್ಲ. ಎಲ್ಲ ವರ್ಗದ, ಎಲ್ಲ ಸಮುದಾಯದ ಜನರನ್ನು ಸಮನಾಗಿ ಕಾಣಬೇಕು. ರಾಜಕಾರಣಿಗಳು ಸಮಾಜದ ಅಭಿವೃದ್ಧಿಗೆ ಗಮನ ಹರಿಸಬೇಕು. ನಾಡಿಗೆ ಅನ್ನವನ್ನು ಕೊಡುವ ರೈತನ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುವ ಅಗತ್ಯ ಇದೆ ಎಂದು ಇದೇ ವೇಳೆ ಹೇಳಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರ ಮೀಸಲಾತಿ ಕೊಡಲಿ : ಮೀಸಲಾತಿ ಕೇಳುವುದು ಎಲ್ಲರ ಹಕ್ಕು. ಅದು ತಪ್ಪಲ್ಲ. ಭಾರತದ ಸಂವಿಧಾನದಲ್ಲಿ ಯಾರಿಗೆ ಎಷ್ಟು ಮೀಸಲಾತಿ ಕೊಡಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ಇದನ್ನು ಜಾರಿಗೆ ತರುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು ಎಂದು ಹೇಳಿದರು. ಆರ್ಥಿಕವಾಗಿ ದುರ್ಬಲ ಇದ್ದವರು, ಹಿಂದುಳಿದವರು ಮೀಸಲಾತಿ ಕೇಳುತ್ತಿದ್ದಾರೆ. ಅಂತವರಿಗೆ ಸರ್ಕಾರ ಸೌಲಭ್ಯ ಕೊಡಲಿ. ಇದರಿಂದ ನಮಗೆ ಸಂತಸ ವಾಗುತ್ತದೆ. ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

ಇನ್ನು ಜಾತಿಯಲ್ಲಿ ಉನ್ನತವಾಗಿರುವವರು, ಆದರೆ ಬಡತನದಲ್ಲಿರುವ ಜಾತಿಯ ಜನತೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಉನ್ನತ ಜಾತಿಯಲ್ಲಿರುವ ಬಡವರ ಸಮಸ್ಯೆ ಬಗೆಹರಿಸುವ ಕೆಲಸವನ್ನೂ ರಾಜಕಾರಣಿಗಳು ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಮೋದಿಗೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು : ನಾರಾಯಣಪುರ ಜಲಾಶಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ. ದೇಶದ ಉದ್ದಗಲಕ್ಕೂ ಪ್ರಧಾನಿ ಮೋದಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಬೆಳೆಯುತ್ತಿರುವ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶದ ಭದ್ರತೆ ಹಾಗೂ ಸಮಗ್ರತೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಪ್ರಧಾನಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವುದು ಭಾರತೀಯ ರೆಲ್ಲರ ಸೌಭಾಗ್ಯವಾಗಿದೆ ಎಂದು ಮೋದಿ ಕಾರ್ಯವೈಖರಿಯನ್ನು ಕೊಂಡಾಡಿದರು.

ಇನ್ನು ರಾಜಕೀಯವಾಗಿ ಬೆಳೆಯುತ್ತಿರುವವರು ಪಕ್ಷಭೇದ ಮರೆತು ಸಮಗ್ರವಾಗಿ ಅಭಿವೃದ್ಧಿ ಮಾಡುವ ಕರ್ತವ್ಯ ಪ್ರಜ್ಞೆಯನ್ನು ಬೆಳಿಸಿಕೊಳ್ಳಬೇಕು.ಆದರ್ಶ ರಾಜಕಾರಣಿಗಳ ಗುಣಧರ್ಮವನ್ನು ಅಳವಡಿಸಿಕೊಂಡು ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.‌

ರಾಜಕಾರಣಿಗಳಿಂದ ಜಾತಿ, ಧರ್ಮಗಳ ಮಧ್ಯೆ ಸಂಘರ್ಷ : ರಾಜಕಾರಣಿಗಳು ಧರ್ಮ ಮತ್ತು‌ ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಕೆಲಸದಲ್ಲಿ ಕೆಲ ರಾಜಕಾರಣಿಗಳು ತೊಡಗಿದ್ದಾರೆ ಎಂದು ಈ ಹಿಂದೆಯೂ ಸ್ವಾಮೀಜಿ ವಾಗ್ದಾಳಿ ನಡೆಸಿದ್ದರು. ರಾಜಕೀಯ ವ್ಯಕ್ತಿಗಳು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮವಹಿಸಬೇಕೇ ವಿನಃ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಆಸೆಗಾಗಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಆಗುತ್ತಿದೆ. ಈ ರೀತಿಯ ಕೆಲಸವನ್ನು ಮಾಡಬಾರದೆಂದು ಕಿವಿ ಮಾತಿ ಹೇಳಿದ್ದರು.

ಇದನ್ನೂ ಓದಿ : ರಾಜಕಾರಣಿಗಳು ಧರ್ಮ, ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ : ರಂಭಾಪುರಿ ಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.