ವಿಜಯಪುರ: ಸಮುದಾಯ ಭವನ ಹಾಗೂ ಹಾಸ್ಟೆಲ್‌ಗಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಇರುವ ಜನರನ್ನು ಕ್ವಾರಂಟೈನ್ ಮಾಡದಂತೆ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ನಗರದ ಬಜಾರ ಸಮುದಾಯ ಭವನದಲ್ಲಿ ಕೊರೊನಾ ಶಂಕಿತರನ್ನು ಜಿಲ್ಲಾಡಳಿತದ ವತಿಯಿಂದ ಕ್ವಾರಂಟೈನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜನ ದಟ್ಟಣೆ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಿದರೆ ಸ್ಥಳೀಯ ನಿವಾಸಿಗಳಿಗೆ ವೈರಸ್ ಭೀತಿ ಎದುರಾಗಲಿದೆ ಹಾಗೂ ವಯೋವೃದ್ದರು ಮತ್ತು ಮಕ್ಕಳಿಗೆ ಭಯದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಾರ್ವಜನಿಕರ ಒಳಿತಗಾಗಿ ಹಾಗೂ ಅವರಲ್ಲಿ ಕೊರೊನಾ ಬಗ್ಗೆ ಭಯ ಮೂಡಿಸದಿರಲು ವಸತಿ ನಿಲಯ ಹಾಗೂ ಸಮುದಾಯ ಭವನಗಳಲ್ಲಿ ಸೋಂಕಿತರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡದಂತೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಯಿತು.