ETV Bharat / state

ಬಡ ಮಹಿಳೆಯರ ಪಿಂಚಣಿ ಹಣ ಪೋಸ್ಟ್​ ಮನ್​ಗಳ ಜೇಬಿಗೆ: ಫಲಾನುಭವಿಗಳ ಆರೋಪ - ಪೋಸ್ಟ್​ಮನ್‌​ಗಳ ವಿರುದ್ಧ ಆರೋಪ

ವಯೋವೃದ್ಧರಿಗೆ ಸರ್ಕಾರ ಮಾಸಿಕವಾಗಿ ನೀಡುವ ಪಿಂಚಣಿ ಹಣವನ್ನು ಸರಿಯಾಗಿ ತಲುಪಿಸದೇ ಪೋಸ್ಟ್​​ಮ್ಯಾನ್​ಗಳು ಪಿಂಚಣಿದಾರರ ಹಣವನ್ನು ಲಪಟಯಿಸುತ್ತಿದ್ದಾರೆ ಎಂಬ ಆರೋಪ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಕೇಳಿ ಬಂದಿದೆ.

old pension issue in vijaypur
ಪಿಂಚಣಿ ಹಣ ನೀಡುವಂತೆ ಮನವಿ
author img

By

Published : Aug 24, 2020, 4:19 PM IST

ವಿಜಯಪುರ: ಪೋಸ್ಟ್​ಮನ್‌ಗಳು ಸರಿಯಾಗಿ ಮಾಸಿಕ ಪಿಂಚಣಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿ ಪಿಂಚಣಿ ಫಲಾನುಭವಿಗಳು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ದಾರೆ.

ಪಿಂಚಣಿ ಹಣ ನೀಡುವಂತೆ ಮನವಿ

ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಪೋಸ್ಟ್​ಮನ್‌ಗಳು ಬಡವರ ಹಣಕ್ಕೆ ಕಣ್ಣು ಹಾಕುತ್ತಿದ್ದು, ಕಳೆದ ಹಲವು ತಿಂಗಳ ಹಿಂದೆಯೇ ಸರ್ಕಾರ ಪಿಂಚಣಿ ಹಣ ಪಾವತಿ ಮಾಡಿದ್ದರೂ, ಅದನ್ನು ಜನರಿಗೆ ತಲುಪಿಸದೆ ಆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 11 ತಿಂಗಳ ಪಿಂಚಣಿ ಹಣ ಬರಬೇಕಾಗಿತ್ತು, ಆದ್ರೆ ಪೋಸ್ಟ್​ಮನ್‌ಗಳು 4 ತಿಂಗಳ ಹಣ ಮಾತ್ರ ನೀಡಿದ್ದಾರೆ‌. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮ‌ನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಿಂಚಣಿದಾರರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ರು.

ಇನ್ನೂ ಪಾಸ್‌ಬುಕ್​​ ನೀಡುತ್ತೇವೆ ಎಂದು ಹೇಳಿ ಬಡವರಿದಿಂದ ಹಣ ಪಡೆದಿದ್ದು, ಇದುವರಿಗೂ ಬ್ಯಾಂಕ್​ ಪಾಸ್‌ಬುಕ್​ ನೀಡಿಲ್ಲ. ಇತ್ತ ಪಿಂಚಣಿ ಹಣವನ್ನೂ ನೀಡುತ್ತಿಲ್ಲ, ಹೀಗಾಗಿ ಜಿಲ್ಲಾಧಿಕಾರಿಗಳು ಪರಿಶೀಲನೆ ನಡಸಿ ತಪ್ಪಿತಸ್ಥರ ವಿರುದ್ಧ ಕ್ರ‌ಮಕ್ಕೆ ಮುಂದಾಗುವಂತೆ ವಯೋವೃದ್ಧರು ಮನವಿ ಸಲ್ಲಿಸಿದ್ರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.