ETV Bharat / state

ವಿಜಯಪುರ: ಬದುಕಿರುವಾಗಲೇ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿದ್ರಾ ಅಧಿಕಾರಿಗಳು? - death cirtificate

ತಾಯಿಯ ಮರಣ ಪ್ರಮಾಣ ಪತ್ರ ಪಡೆಯಲು ಹೋದ ವೃದ್ಧೆ ಸಾವಿತ್ರಿ ಅವರಿಗೆ ತನ್ನದೇ ಮರಣ ಪ್ರಮಾಣಪತ್ರ ನೋಡಿ ಆಘಾತ ಆಗಿದೆ.

Old woman Savithri
ಮರಣ ಪ್ರಮಾಣ ಪತ್ರ ಪಡೆದ ವೃದ್ಧೆ ಸಾವಿತ್ರಿ
author img

By

Published : Apr 6, 2023, 1:32 PM IST

Updated : Apr 6, 2023, 1:43 PM IST

ಮರಣ ಪ್ರಮಾಣ ಪತ್ರ ಪಡೆದ ವೃದ್ಧೆ ಸಾವಿತ್ರಿ

ವಿಜಯಪುರ: ಬದುಕಿರುವಾಗಲೇ ವೃದ್ಧೆಯೊಬ್ಬರಿಗೆ ಮರಣ ಪ್ರಮಾಣಪತ್ರ ನೀಡಿದ ವಿಚಿತ್ರ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದರ ಹಿಂದೆ ಸಂಬಂಧಿಕರ ಆಸ್ತಿ ಹೊಡೆಯುವ ದುರಾಲೋಚನೆ ಇತ್ತಾ? ಅಥವಾ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೇ ಇನ್ನುವ ಪ್ರಶ್ನೆ ಎದುರಾಗಿದೆ.

ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳೆ ಎಂಬುವರಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಮರಣ ಪ್ರಮಾಣ ಪತ್ರ ನೀಡಿ ಅಚ್ಚರಿ ಮೂಡಿಸಿದ್ದಾರೆ. ವೃದ್ಧೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪ್ರಮಾಣಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001 ರಲ್ಲಿ ನಿಧನರಾಗಿದ್ದೀರಿ ಎಂದು ಅವರ ಮರಣ ಪತ್ರವನ್ನೇ ನೀಡಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.

ಸಾವಿತ್ರಿ ಮೂಲತಃ ಹೊನ್ನಳ್ಳಿ ಗ್ರಾಮದವರು. ಇವರು ತಂದೆಗೆ ಒಬ್ಬಳೇ ಮಗಳಾಗಿದ್ದು, ಅಪ್ಪ ನಿಧನರಾದ ನಂತರ ಅವರ 12 ಎಕರೆ ಹೊಲ ಇವರ ಹೆಸರಿಗೆ ಬಂದಿತ್ತು. ಈ ಆಸ್ತಿ ಲಪಟಾಯಿಸಲು ತಮ್ಮ ಸಂಬಂಧಿಕರೊಬ್ಬರು ದತ್ತು ಪುತ್ರನೆಂದು ಬಿಂಬಿಸಿ ತನ್ನ ಆಸ್ತಿ ಕಬಳಿಸಲು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ ಎಂದು ಸಾವಿತ್ರಿ ಮಾಳೆ ಆರೋಪಿಸಿದ್ದಾರೆ.

ಮರಣ ಪತ್ರದ ರಹಸ್ಯವೇನು?: ಸಾವಿತ್ರಿ ಮಾಳೆಯ ಪತಿ ನಿಂಗಪ್ಪ ಮಾಳೆ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವಿದ್ಯಾವಂತರು, ಪ್ರಪಂಚದ ಜ್ಞಾನ ಸಹ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಅವರ ಸಂಬಂಧಿಕರೊಬ್ಬರು ಸಾವಿತ್ರಿ ಹೆಸರಿನಲ್ಲಿರುವ 12 ಎಕರೆ ಜಮೀನು ಹೊಡೆಯಲು 2001ರಲ್ಲಿ ಸಾವಿತ್ರಿ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 11-03-2001ರಂದು ನಿಧನರಾಗಿದ್ದಾರೆಂದು ಚಡಚಣದ ಗ್ರಾಮ ಲೆಕ್ಕಾಧಿಕಾರಿ ಮೂಲಕ ಜನನ ಮತ್ತು ಮರಣಗಳ ನೋಂದಣಿ ಕಚೇರಿಯಲ್ಲಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದು ನೋಂದಣಿಯಾಗಿದ್ದು ಮಾತ್ರ 2-01-2013 ರಂದು. ನಂತರ 5-01-2023ರಂದು ಮರಣ ಪ್ರಮಾಣ ಪತ್ರಕ್ಕೆ ಅನುಮೋದನೆ ದೊರೆತಿದೆ. ಈ ವಿಚಾರ ಗೊತ್ತಿಲ್ಲದ ವೃದ್ಧೆ ಸಾವಿತ್ರಿ ತಮ್ಮ ತಾಯಿಯ ಮರಣ ಪ್ರಮಾಣ ಪತ್ರ ಪಡೆಯಲು ಹೋದಾಗ ತನ್ನ ಮರಣ ಪ್ರಮಾಣ ಪತ್ರ ನೀಡಿದ ಮೇಲೆ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ನ್ಯಾಯಾಲಯದ ಮೆಟ್ಟಿಲೇರಿರುವ ವೃದ್ಧೆ ಸಾವಿತ್ರಿ ಮಾಳೆ ಜೀವಿತಾವಧಿಯಲ್ಲಿ ಮರಣ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.‌ ಜತೆಗೆ ಮಾನಸಿಕವಾಗಿ ನೊಂದಿರುವ ತಮಗೆ ಕಾನೂನಿನ‌ ನೆರವು ನೀಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಅರ್ಜಿ ಬರೆದಿದ್ದಾರೆ.

ವಕೀಲರು ಏನಂತಾರೆ?: ಕಾನೂನು ಪ್ರಾಧಿಕಾರಕ್ಕೆ ಸಾವಿತ್ರಿ ಅವರು ಅರ್ಜಿ ಹಾಕಿದ ಮೇಲೆ ಪ್ರಕರಣ ವಕೀಲರ ಗಮನಕ್ಕೆ ಬಂದಿದೆ. ಜೀವಂತವಿರುವಾಗಲೇ ವೃದ್ಧೆಗೆ ಮರಣ ಪ್ರಮಾಣಪತ್ರ ನೀಡಿರುವುದು ದೊಡ್ಡ ಅಪರಾಧವಾಗಿದೆ ಎಂದು ಹಿರಿಯ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಹೇಳಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇಂಥ ಪ್ರಕರಣ ನೋಡಿರಲಿಲ್ಲ, ಅವರು ಹೇಳುವಂತೆ ಆಸ್ತಿಗಾಗಿ ಈ ರೀತಿ ಮಾಡಿದ್ದಾರೆ. ಏನೇ ಇರಲಿ ಜೀವಂತವಿರುವ ವ್ಯಕ್ತಿಗಳಿಗೆ ಮರಣ ಪ್ರಮಾಣಪತ್ರ ನೀಡಿದ್ದಾರೆ.

ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟ ಕೈಗೊಳ್ಖಲಾಗುವುದು ಎಂದು ಎಚ್ಚರಿಸಿದ್ದಾರೆ. ಏನೇ ಇರಲಿ, ಜೀವಂತವಿರುವ ವೃದ್ಧೆಗೆ ಮರಣ ಪ್ರಮಾಣ ಪತ್ರ ನೀಡಿ ಎಸಗಿರುವ ಪ್ರಮಾದದಿಂದ ಜನನ ಮತ್ತು ಮರಣ ನೋಂದಣಿ ಅಧಿಕಾರಿ ಇಲಾಖೆಯನ್ನು ಅಣುಕಿಸುವಂತಾಗಿದೆ.

ಇದನ್ನೂ ಓದಿ: 41 ವರ್ಷದ ಮಹಿಳೆಗೆ ಆಧಾರ್​ನಲ್ಲಿ 123 ವರ್ಷ.. ಸರ್ಕಾರದ ಸವಲತ್ತುಗಳಿಂದ ವಂಚಿತರಾದ ಮಹಿಳೆ

Last Updated : Apr 6, 2023, 1:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.