ಮುದ್ದೇಬಿಹಾಳ : ಕಳಪೆ ಕಾಮಗಾರಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದಷ್ಟೇ ನಿರ್ಮಾಣ ಮಾಡಿದ್ದ ಸಿಮೆಂಟ್ ರಸ್ತೆಯನ್ನು ಕಿತ್ತು ಮರು ನಿರ್ಮಾಣ ಮಾಡಲು ಅಧಿಕಾರಿಗಳು, ಗುತ್ತಿಗೆದಾರರು ಮುಂದಾಗಿದ್ದಾರೆ.
ಪಟ್ಟಣದ ಹೊಸ ನ್ಯಾಯಾಲಯದ ಹಿಂಭಾಗದಲ್ಲಿರುವ ಗಣೇಶ ನಗರದಲ್ಲಿ ನಿರ್ಮಿಸಲಾಗಿದ್ದ ಸಿಮೆಂಟ್ ರಸ್ತೆಯ ಮಧ್ಯೆ ಬಿರುಕು ಕಂಡು ಬಂದಿತ್ತು. ಇದರಿಂದ ಪುರಸಭೆಯ ಕೆಲವು ಸದಸ್ಯರು, ಮಾಜಿ ಸದಸ್ಯರು, ಸಂಘಟನೆಗಳ ಹೋರಾಟಗಾರರು ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಕಿತ್ತು ಹೊಸದಾಗಿ ರಸ್ತೆ ಮಾಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದರು.
ಈ ದೂರಿಗೆ ಸ್ಪಂದಿಸಿರುವ ಅಧಿಕಾರಿಗಳು ಆಗಿರುವ ತಪ್ಪನ್ನು ಸರಿಪಡಿಸುತ್ತಿದ್ದಾರೆ. ಗುತ್ತಿಗೆದಾರರು, ಅಧಿಕಾರಿಗಳು ಮತ್ತೆ ಹೊಸದಾಗಿಯೇ ಕಾಂಕ್ರೀಟ್ ರಸ್ತೆ ಮಾಡಲು ಚಾಲನೆ ನೀಡಿದ್ದಾರೆ.