ವಿಜಯಪುರ: ಬೆಡ್ ಹಾಗೂ ಆಕ್ಸಿಜನ್ ಇಲ್ಲದೇ ಕೊರೊನಾ ರೋಗಿಯೊಬ್ಬರನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಕಾಲ ಕಳೆದ ಘಟನೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಈ ಘಟನೆ ಹಾಗೂ ಒಟ್ಟಾರೆ ಜಿಲ್ಲಾಸ್ಪತ್ರೆಯ ಈಗಿನ ದುಸ್ಥಿತಿಯನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.
ಕೋವಿಡ್ ರೋಗಿಗೆ ಬೆಡ್ ನೀಡದೆ ಒಂದು ಗಂಟೆಗಳ ಕಾಲ ಸ್ಟ್ರೆಚರ್ ಮೇಲೆ ಆಸ್ಪತ್ರೆ ಸಿಬ್ಬಂದಿ ಮಲಗಿಸಿ ಅಮಾನವೀಯತೆ ಮೆರೆದಿದ್ದಾರೆ ಎನ್ನಲಾಗಿದೆ. ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಕೊರೊನಾ ರೋಗಿಗೆ ಚಿಕಿತ್ಸೆ ಸಿಗದೆ ಪರದಾಡಿದ್ದಾನೆ.
ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ಬಂದ್ರೆ ಕೋವಿಡ್ ಪರೀಕ್ಷೆ ಮಾಡುವವರು ಇಲ್ಲ. ಕೊರೊನಾ ರೋಗಿಗಳು ಇರುವ ವಾರ್ಡ್ನಲ್ಲೇ ಬಿಂದಾಸ್ ಆಗಿ ನಾನ್ ಕೋವಿಡ್ ವ್ಯಕ್ತಿಗಳು ನಡೆದಾಡುತ್ತಿದ್ದಾರೆ. ಕೋವಿಡ್ ಐಸಿಯು ವಾರ್ಡ್ನಲ್ಲೇ ಸಂಬಂಧಿಕರು, ಕುಟುಂಬಸ್ಥರು ಕಾಲ ಕಳೆಯುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಸಮಾಧಾನ ಹೊರ ಹಾಕಿದ್ದಾರೆ.
ಐಸಿಯುಗಳಲ್ಲಿ ರೋಗಿಗಳ ಕಂಡಿಷನ್ ನೋಡಿಕೊಳ್ಳಲು ವೈದ್ಯ ಸಿಬ್ಬಂದಿ ಕೂಡ ಇಲ್ಲವಾಗಿದೆ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.