ETV Bharat / state

ನಾಲ್ವರು ಸಹೋದರರ ನಡುವಿನ ಆಸ್ತಿ ಕಲಹ ಮಾವನ ಕೊಲೆಯಲ್ಲಿ ಅಂತ್ಯ! - ವಿಜಯಪುರದ ಜಲನಗರ ಪೊಲೀಸ್​ ಠಾಣೆ

ಆಸ್ತಿ ವಿಚಾರವಾಗಿ ತಮ್ಮನ ಪರವಾಗಿ ವಕಾಲತ್ತು ವಹಿಸುತ್ತಿದ್ದ ಮಾವನನ್ನು ಮೂವರು ಸಹೋದರರು ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

asd
ಆಸ್ತಿಗಾಗಿ ಬಿತ್ತು ಮಾವನ
author img

By

Published : May 30, 2020, 4:36 PM IST

ವಿಜಯಪುರ: ಆಸ್ತಿಗಾಗಿ ನಡೆಯುತ್ತಿದ್ದ ನಾಲ್ವರು ಸಹೋದರರ ಕಲಹ ಮಾವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಜಲನಗರದಲ್ಲಿ ನಡೆದಿದೆ.

ಉಸ್ಮಾನ್ ಪಾಷಾ ಇನಾಂದಾರ್ (71) ಕೊಲೆಯಾದ ವೃದ್ಧ. ಜಿಲಾನಿಪಾಶಾ ಜಾಗೀರದಾರ್‌, ನದೀಮ್‌ ಜಾಗೀರದಾರ್‌, ಖಾದ್ರಿ ಜಾಗೀರದಾರ್‌ ಕೊಲೆ ಮಾಡಿದ ಆರೋಪಿಗಳು ಎನ್ನಲಾಗಿದೆ. ಕೊಲೆಯಾದ ಉಸ್ಮಾನ್‌ ಪಾಷಾ ಅಕ್ಕನ ನಾಲ್ವರು ಮಕ್ಕಳಲ್ಲಿ ಆಸ್ತಿ ವಿಚಾರವಾಗಿ ಕಲಹ ನಡೆದಿತ್ತು. ಎಲ್ಲರಿಗೂ ತಿಳಿಹೇಳಿ ಬಗೆಹರಿಸಬೇಕಿದ್ದ ಉಸ್ಮಾನ್‌ ಪಾಷಾ, ಅಕ್ಕನ ಕೊನೆಯ ಮಗ ಸಮೀರ್‌ ಜಾಗೀರದಾರ್‌ ಪರವಾಗಿ ವಕಾಲತ್ತು ವಹಿಸುತ್ತಿದ್ದರಂತೆ.

ಇದರಿಂದ ರೊಚ್ಚಿಗೆದ್ದ ಮೂವರು ಸಹೋದರರು ಉಸ್ಮಾನ್‌ ಪಾಷಾನನ್ನು ಊರ ಹೊರಗೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿಎಸ್​ಪಿ ಲಕ್ಷ್ಮೀ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.