ETV Bharat / state

ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಆಡಳಿತ ಮಂಡಳಿ : ಇದು ಈಟಿವಿ ಭಾರತ ಫಲಶ್ರುತಿ

ವಾರ್ಡ್​ ಸದಸ್ಯೆ ಸಹನಾ ಬಡಿಗೇರ ನಿವಾಸಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. ನಾನು ನಿಮ್ಮ ಪರವಾಗಿಯೇ ಪುರಸಭೆಯಲ್ಲಿ ಧ್ವನಿ ಎತ್ತಿರುತ್ತೇನೆ. ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತರದೇ ಮಾಧ್ಯಮಗಳ ಎದುರಿಗೆ ಹೋಗುವುದು ಎಷ್ಟು ಸರಿ. ನನ್ನ ಮುಖವನ್ನು ನೋಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ..

Municipality of Muddebihala
ಮುದ್ದೇಬಿಹಾಳ ಪುರಸಭೆ
author img

By

Published : Apr 5, 2021, 10:12 PM IST

ಮುದ್ದೇಬಿಹಾಳ : ವಸತಿ ಶಾಲೆಯೊಂದರ ಕೊಳಚೆ ನೀರಿನಿಂದ ನಿವಾಸಿಗಳಿಗೆ ತೊಂದರೆಯಾಗಿರುವ ಕುರಿತು ಈಟಿವಿ ಭಾರತದಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತು ವಾರ್ಡ್​ ಸದಸ್ಯೆ ಸೇರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯಾನಗರ ಬಡಾವಣೆ ನಿವಾಸಿಗಳ ಅಹವಾಲುಗಳಿಗೆ ಆಲಿಸಿದ್ದಾರೆ.

ಈಟಿವಿ ಭಾರತ ವರದಿಯಿಂದ ಎಚ್ಚೆತ್ತ ವಾರ್ಡ್‌ ಸದಸ್ಯೆ ಮತ್ತು ಅಧಿಕಾರಿಗಳು..

ಪಟ್ಟಣದ ವಿದ್ಯಾನಗರದಲ್ಲಿರುವ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿ ವಸತಿ ಶಾಲೆಯೊಂದರಿಂದ ಕೊಳಚೆ ನೀರು ಹರಿಯ ಬಿಡಲಾಗಿತ್ತು. ಅಲ್ಲದೇ ಸರ್ವೀಸ್ ಚೇಂಬರ್ ತುಂಬಿ ಹರಿದು ದುರ್ವಾಸನೆ ಹರಡಿತ್ತು. ಸಾಕಷ್ಟು ಬಾರಿ ಈ ಕುರಿತು ಸಂಬಂಧಿಸಿದವರಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜವಾಗಿರಲಿಲ್ಲ.

ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವಾರ್ಡ್​ ಸದಸ್ಯೆ ಸಹನಾ ಬಡಿಗೇರ, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡ್​ ನಿವಾಸಿಗಳು ಸೊಳ್ಳೆಗಳ ಕಾಟಕ್ಕೆ ಬೇಸತ್ತು ನಿತ್ಯವೂ ನಮ್ಮ ಜೀವನ ನಡೆಸುವುದೇ ಕಷ್ಟಕರವಾಗಿತ್ತು.

ಸಂಬಂಧಿಸಿದವರಿಗೆ ಹೇಳಿ ಸಾಕಾಗಿದ್ದರಿಂದ ಮಾಧ್ಯಮದವರ ಎದುರಿಗೆ ನಮ್ಮ ಗೋಳು ತೋಡಿಕೊಂಡಿದ್ದೆವು. ಈಗ ಸಮಸ್ಯೆ ಕೇಳಲು ಬಂದಿದ್ದೀರಿ. ನಮ್ಮ ಪ್ರದೇಶದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಕಸ ಎತ್ತಿಕೊಳ್ಳಲು ಗಾಡಿ ಕಳಿಸಬೇಕು. ಚರಂಡಿ ಶುಚಿಗೊಳಿಸಬೇಕು. ಸಿಸಿ ರಸ್ತೆ ಮಾಡಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟರು.

ಓದಿ:ನಿವಾಸಿಗಳಿಗೆ ನರಕಯಾತನೆ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಇನ್ನು, ವಾರ್ಡ್​ ಸದಸ್ಯೆ ಸಹನಾ ಬಡಿಗೇರ ನಿವಾಸಿಗಳೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು. ನಾನು ನಿಮ್ಮ ಪರವಾಗಿಯೇ ಪುರಸಭೆಯಲ್ಲಿ ಧ್ವನಿ ಎತ್ತಿರುತ್ತೇನೆ. ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತರದೇ ಮಾಧ್ಯಮಗಳ ಎದುರಿಗೆ ಹೋಗುವುದು ಎಷ್ಟು ಸರಿ. ನನ್ನ ಮುಖವನ್ನು ನೋಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.