ಮುದ್ದೇಬಿಹಾಳ: ಪಟ್ಟಣ ಹಾಗೂ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿ ನಿಯಂತ್ರಣಕ್ಕಾಗಿ 10 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಸಮಸ್ತ ವ್ಯಾಪಾರಸ್ಥರು ಕಠಿಣ ನಿರ್ಣಯ ಕೈಗೊಂಡಿದ್ದಾರೆ. ಪಟ್ಟಣದ ವಿ.ವಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಕರೆದಿದ್ದ ವ್ಯಾಪಾರಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಕರ್ನಾಟಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಗಣ್ಯ ವರ್ತಕ ಪ್ರಭು ಕಡಿ ಮಾತನಾಡಿ, ತಾಲೂಕಿನಲ್ಲಿ ಹಾಗೂ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರುತ್ತಿದೆ. ಜೀವನಕ್ಕಿಂತ ಹಣ ಮುಖ್ಯವಲ್ಲ. ಸ್ವಯಂ ಲಾಕ್‌ಡೌನ್ ಘೋಷಣೆ ಮಾಡಿಕೊಂಡ ನಂತರ ಮನಸ್ಸಿಗೆ ಬಂದಂತೆ ಮಾಡುವುದನ್ನು ಕೈ ಬಿಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಸಹಾಯಕ ಎಂ.ಎಸ್. ಗೌಡರ ಮಾತನಾಡಿ, ವ್ಯಾಪಾರಸ್ಥರು ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವುದು, ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸ್ವಯಂ ಲಾಕ್‌ಡೌನ್ ಸಮಯ ನಿಗದಿ :
ಮುದ್ದೇಬಿಹಾಳ ಪಟ್ಟಣದಲ್ಲಿ ಜುಲೈ 27 ರಿಂದ 29 ರವರೆಗೆ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಬಗೆಯ ವ್ಯಾಪಾರ ಮಾಡಲು ಅವಕಾಶ ನೀಡಲಾಗುತ್ತಿದೆ. ಜು.30 ರಿಂದ ಆ.9 ರವರೆಗೆ ಸ್ವಯಂಪ್ರೇರಿತರಾಗಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ. ಇದರಲ್ಲಿ ಅಗತ್ಯ ವಸ್ತುಗಳಾದ ಮೆಡಿಕಲ್, ರಸಗೊಬ್ಬರ, ಕಾಯಿಪಲ್ಯೆ, ಹಾಲು, ದಿನಪತ್ರಿಕೆ ಮಾರಾಟಕ್ಕೆ ಈ ಸಮಯದಲ್ಲಿ ಅವಕಾಶ ಇರಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಶವಸಂಸ್ಕಾರಕ್ಕೆ 1.50 ಲಕ್ಷ ರೂ.ಖರ್ಚು :
ಸ್ವಯಂ ಲಾಕ್‌ಡೌನ್ ಘೋಷಣೆ ನಿರ್ಣಯ ಪ್ರಕಟಿಸುವುದಕ್ಕೂ ಮುನ್ನ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಕೊರೊನಾ ವೈರಸ್ ಹಾವಳಿ ನಿಯಂತ್ರಣದ ಸಲುವಾಗಿ ಈ ನಿರ್ಣಯ ಮಾಡುತ್ತಿದ್ದು ದಯವಿಟ್ಟು ಎಲ್ಲ ಊರಿನ ವ್ಯಾಪಾರಸ್ಥರು ಈ ಸ್ವಯಂ ಲಾಕ್‌ಡೌನ್‌ಗೆ ಸಹಕರಿಸುವಂತೆ ಮನವಿ ಮಾಡಿದರು.