ETV Bharat / state

ಕೊರೊನಾ ಮಾರ್ಗಸೂಚಿ ಪಾಲನೆ ಜೊತೆ ಬಡವರಿಗೆ ರೇಷನ್ ಕಿಟ್ ವಿತರಿಸಿದ ನಾಲತವಾಡ ಸಂಘ

ಬಡವರಿಗೆ ರೇಷನ್ ಆಹಾರ ಧಾನ್ಯವನ್ನು ವಿತರಿಸುವ ಕಾರ್ಯವನ್ನು ತಾಲೂಕಿನ ನಾಲತವಾಡ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಶಾಖೆಯಲ್ಲಿ ಮಾಡಲಾಯಿತು.

Ration
Ration
author img

By

Published : Apr 24, 2021, 3:01 PM IST

Updated : Apr 24, 2021, 7:40 PM IST

ಮುದ್ದೇಬಿಹಾಳ: ಕೊರೊನಾ ವೈರಸ್ ವಿರುದ್ಧ ಸಮರ ಸಾರಿರುವ ಸರ್ಕಾರದ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಬಡವರಿಗೆ ರೇಷನ್ ವಿತರಿಸುವ ಕಾರ್ಯವನ್ನು ತಾಲೂಕಿನ ನಾಲತವಡಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಶಾಖೆಯಲ್ಲಿ ಮಾಡಲಾಯಿತು.

ಕೊರೊನಾ ಮಾರ್ಗಸೂಚಿ ಪಾಲನೆ ಜೊತೆ ಬಡವರಿಗೆ ರೇಷನ್ ಕಿಟ್ ವಿತರಿಸಿದ ನಾಲತವಾಡ ಸಂಘ

ಕೊರೊನಾ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡೋಣ. ಸಾಮಾಜಿಕ ಅಂತರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸರ್ ಬಳಸೋಣ ಎಂಬಿತ್ಯಾದಿ ಘೋಷ ವಾಕ್ಯಗಳನ್ನು ಬರೆದ ನಾಮಫಲಕಗಳು, ಪ್ರತಿ ಮೂರು ಅಡಿ ದೂರದಲ್ಲಿ ಸುಣ್ಣದ ಗೆರೆಯ ಬಾಕ್ಸ್ ಹಾಕಿ ಅಲ್ಲಿ ಒಬ್ಬೊಬ್ಬರಾಗಿ ಪಡಿತರ ಪಡೆದುಕೊಳ್ಳಲು ಬರುವ ವ್ಯವಸ್ಥೆ ಮಾಡಲಾಗಿತ್ತು.

ಪಡಿತರ ಆಹಾರ ಧಾನ್ಯ ಪಡೆದುಕೊಳ್ಳಲು ಬಂದ ಬಡವರು ಬಿಸಿಲಿನಲ್ಲಿ ನಿಲ್ಲಬಾರದು ಎಂಬ ಉದ್ದೇಶದಿಂದ ಹಸಿರು ಚಪ್ಪರ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಿ ಆಹಾರ ಧಾನ್ಯ ವಿತರಿಸಲಾಯಿತು.

ಟಿ.ಎ.ಪಿ.ಸಿ.ಎಂ.ಎಸ್ ಕೇಂದ್ರದಲ್ಲಿ ಪಡಿತರ ವಿತರಣೆಯನ್ನು ಸಹಾಯಕ ವ್ಯವಸ್ಥಾಪಕ ಶರಣಪ್ಪ ಚಿನಿವಾಲ ಮಾಡಿದರು.

Last Updated : Apr 24, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.