ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತ್ ಸದಸ್ಯ ಶಿವಬಸು ಸಜ್ಜನ ಅವರಿಗೆ ತಹಶೀಲ್ದಾರ್ ಬಿಗ್ ಶಾಕ್ ನೀಡಿದ್ದಾರೆ.
ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಸ್ಥಾನಕ್ಕೆ ಇಂದು ಆಯ್ಕೆ ನಡೆಯಲಿದ್ದು, ಅದೇ ಪಂಚಾಯತ್ ಸದಸ್ಯೆ ನಂದಾ ಬಾಗೇವಾಡಿ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಶಿವಬಸು ಸಜ್ಜನ ಅವರಿಗೆ ನೀಡಲಾಗಿದ್ದ, ಹಿಂದುಳಿದ ವರ್ಗ ಬ ಪ್ರಮಾಣ ಪತ್ರಕ್ಕೆ ತಡೆ ನೀಡಲಾಗಿದೆ ಎಂದು ತಹಶೀಲ್ದಾರ್ ರಾತ್ರೋರಾತ್ರಿ ಆದೇಶ ನೀಡಿದ್ದಾರೆ.
ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಿಜಿಸ್ಟರ್ ನಂ.1 ರಲ್ಲಿ ಪರಿಶೀಲನೆ ನಡೆಸಲಾಗಿ ಸಜ್ಜನ ಅವರ ಜಾತಿ ಕಾಲಂನಲ್ಲಿ ಗಾಣಿಗ ಎಂದು ಇದೆ. ಆ ಸಮಾಜದವರು ಹಿಂದುಳಿದ ವರ್ಗ 'ಅ' ವರ್ಗದಲ್ಲಿ ಬರುತ್ತಿರುವುದರಿಂದ ಸಜ್ಜನ ಅವರಿಗೆ ಜ.25 ರಂದು ನೀಡಲಾಗಿದ್ದ ಹಿಂದುಳಿದ ವರ್ಗ 'ಬ' ಪ್ರಮಾಣ ಪತ್ರವನ್ನು ತಡೆ ಹಿಡಿಯಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಓದಿ: ಗ್ರಾ.ಪಂ. ಸದಸ್ಯನ ಜಾತಿ ಪ್ರಮಾಣಪತ್ರ ರದ್ದುಗೊಳಿಸಲು ಅರ್ಜಿ: ಕೊನೆ ಕ್ಷಣದಲ್ಲಿ ಕುತೂಹಲ ಮೂಡಿಸಿದ ತಹಶೀಲ್ದಾರ್ ಪತ್ರ
ಸದ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಬಸು ಸಜ್ಜನ ಅವರ ಮುಂದಿನ ನಡೆ ಏನಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.