ETV Bharat / state

ಕೆಟ್ಟು ನಿಂತ ಫಾಗಿಂಗ್ ಯಂತ್ರ: ಮುದ್ದೇಬಿಹಾಳ ಪುರಸಭೆಯಲ್ಲಿ ಗುಜರಿ ಗಾಡಿಗಳದ್ದೇ ದರ್ಬಾರ್!

ದುರಸ್ತಿ ಮಾಡಿ ಬಳಕೆ ಮಾಡಲು ಸಾಧ್ಯವಿದ್ದರೂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಈ ಕುರಿತು ಯೋಜನಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪುರಸಭೆಯ ಕಸದ ವಿಲೇವಾರಿ ಸಮಸ್ಯೆ ಬಗೆಹರಿಸಿಲ್ಲ. ಒಂದಿಲ್ಲೊಂದು ವಾರ್ಡ್​ಗಳಲ್ಲಿ ಕಸದ ವಾಹನ ಬರುವುದಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ.

Muddebihal
ಮುದ್ದೇಬಿಹಾಳ ಪುರಸಭೆಯಲ್ಲಿ ಗುಜರಿ ಗಾಡಿಗಳದ್ದೇ ದರ್ಬಾರ್
author img

By

Published : Apr 11, 2021, 8:12 PM IST

ಮುದ್ದೇಬಿಹಾಳ: ಲಕ್ಷಾಂತರ ರೂ. ಖರ್ಚು ಮಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆಂದು ಖರೀದಿಸಿದ ತ್ಯಾಜ್ಯ ಸಂಗ್ರಹ ವಾಹನಗಳೀಗ ಗುಜರಿ ಅಂಗಡಿ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುದ್ದೇಬಿಹಾಳ ಪುರಸಭೆಯಲ್ಲಿ ಗುಜರಿ ಗಾಡಿಗಳದ್ದೇ ದರ್ಬಾರ್

ದುರಸ್ತಿ ಮಾಡಿ ಬಳಕೆ ಮಾಡಲು ಸಾಧ್ಯವಿದ್ದರೂ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಈ ಕುರಿತು ಯೋಜನಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಪುರಸಭೆಯ ಕಸದ ವಿಲೇವಾರಿ ಸಮಸ್ಯೆ ಬಗೆ ಹರಿಸಿಲ್ಲ. ಒಂದಿಲ್ಲೊಂದು ವಾರ್ಡ್​ಗಳಲ್ಲಿ ಕಸದ ವಾಹನ ಬರುವುದಿಲ್ಲ ಎಂಬ ಆರೋಪಗಳು ಸಾಮಾನ್ಯವಾಗಿವೆ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ವೀರೇಶ ಹಡಲಗೇರಿ ಆಗ್ರಹಿಸಿದ್ದಾರೆ.

ಪಟ್ಟಣದ ವ್ಯಾಪ್ತಿಯಲ್ಲಿ 23 ವಾರ್ಡ್​ಗಳಿದ್ದು, ನಿತ್ಯವೂ ಕಸ ಸಂಗ್ರಹಕ್ಕೆ ನಾಲ್ಕು ವಾಹನಗಳಿದ್ದವು. ಅವುಗಳಿಗೆ ಬೆಳಗ್ಗೆಯೇ ಸ್ವಚ್ಛತೆಯ ಗೀತೆಯನ್ನು ಹಾಕಿಕೊಂಡು ಪ್ರತಿಯೊಂದು ವಾರ್ಡ್​ನ ಓಣಿಗಳಿಗೆ ತೆರಳಿ ನಿವಾಸಿಗಳಿಂದ ನೇರವಾಗಿ ಕಸ ಸಂಗ್ರಹಿಸಲಾಗುತ್ತಿದೆ. ಆದರೀಗ ಎರಡು ವಾಹನಗಳನ್ನು ಗುಜರಿಗೆ ಹಾಕುವ ಪರಿಸ್ಥಿತಿ ಬಂದೊದಗಿದೆ. ಪಟ್ಟಣದ ಕುಡಿವ ನೀರು ಶುದ್ಧೀಕರಣ ಘಟಕದಲ್ಲಿರುವ ಕಸ ಸಂಗ್ರಹದ ವಾಹನಗಳು ರಿಪೇರಿಗೆ ಬಂದಿದ್ದು, ಅವುಗಳ ದುರಸ್ತಿಗೆ ತಗಲುವ ವೆಚ್ಚದಲ್ಲಿ ಹೊಸ ವಾಹನಗಳನ್ನೇ ಖರೀದಿಸಬಹುದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಕೇವಲ ಎರಡೇ ವಾಹನಗಳು ನಿತ್ಯವೂ ಇಡೀ ಪಟ್ಟಣದ ಕಸ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ಇನ್ನೆರಡು ವಾಹನಗಳ ಅಗತ್ಯತೆ ಇದೆ. ಹಾಗಾಗಿ ಅವುಗಳು ಕೆಟ್ಟು ನಿಂತು ಎರಡು ತಿಂಗಳು ಕಳೆದರೂ ದುರಸ್ತಿ ಮಾಡಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂಬ ಆರೋಪ ಪುರಸಭೆ ಸದಸ್ಯರದ್ದಾಗಿದೆ.

ಫಾಗಿಂಗ್ ನಿಲ್ಲಿಸಿದ ಯಂತ್ರ:

ಬೇಸಿಗೆ ಸಮಯವಾದ್ದರಿಂದ ಚರಂಡಿಗಳು ಸ್ವಚ್ಛವಾಗಿಲ್ಲದ ಕಡೆ ಸೊಳ್ಳೆಗಳ ಹಾವಳಿ ಮೀತಿ ಮೀರಿರುತ್ತದೆ. ಅದಕ್ಕಾಗಿ ಫಾಗಿಂಗ್ ಮಾಡಲು ಖರೀದಿಸಿದ್ದ ಮಷಿನ್, ಅದರ ಜೊತೆಗಿನ ವಾಹನವೂ ದುರಸ್ತಿಗೆ ಬಂದಿದೆ.

ಕಸ ಸಂಗ್ರಹ ಗಾಡಿಗಳು ವೇಸ್ಟ್?:

ಸ್ವ-ಸಹಾಯ ಸಂಘಗಳ ಮೂಲಕ ಮನೆ ಮನೆಗಳಿಗೆ ತೆರಳಿ ಕೈಗಾಡಿಗಳಲ್ಲಿ ಕಸ ಸಂಗ್ರಹಿಸುತ್ತಿದ್ದ ಕೆಲವು ಜನ ಗುತ್ತಿಗೆ ಕಾರ್ಮಿಕರನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಕೈ ಬಿಡಲಾಗಿದೆ. ಆದರೆ ರಸ್ತೆ ಇಕ್ಕಟ್ಟಾಗಿರುವ ಕಡೆಗಳಲ್ಲಿ ತಳ್ಳು ಗಾಡಿಗಳಲ್ಲಿ ಕಸ ಸಂಗ್ರಹಕ್ಕೆಂದು ಗಾಡಿಗಳನ್ನು ಖರೀದಿಸಿದ್ದು, ಅವುಗಳು ಬಳಕೆಯಾಗದೆ 16 ಗಾಡಿಗಳು ಕುಡಿವ ನೀರಿನ ಘಟಕದಲ್ಲಿ ಹಾಗೆಯೇ ಅನಾಥವಾಗಿ ಬಿದ್ದಿವೆ.

ಬಾಡಿಗೆಗೆ ಟ್ರ್ಯಾಕ್ಟರ್:

ಶುದ್ಧೀಕರಣ ಘಟಕದಲ್ಲಿ ಪುರಸಭೆಗೆ ಸೇರಿದ ಟ್ರ್ಯಾಕ್ಟರ್ವೊಂದು ಕೆಟ್ಟು ನಿಂತಿದೆ. ಇದರಿಂದಾಗಿ ಕಳೆದ ಎರಡ್ಮೂರು ದಿನಗಳಿಂದ ಬಾಡಿಗೆ ದರದಲ್ಲಿ ಟ್ರ್ಯಾಕ್ಟರ್ ತೆಗೆದುಕೊಂಡು ಚರಂಡಿ ತ್ಯಾಜ್ಯ ಸಾಗಿಸಲು ಬಳಸಲಾಗುತ್ತಿದೆ. ಇರುವ ಸಂಪನ್ಮೂಲವನ್ನು ಬಳಸಿಕೊಳ್ಳದೇ ದುಂದುವೆಚ್ಚಕ್ಕೆ ಪುರಸಭೆ ಆಡಳಿತ ಮಂಡಳಿ ಮುಂದಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.