ETV Bharat / state

ಕೈ ಸೇರಿದ ಉಚಿತ ಟ್ಯಾಬ್ಲೆಟ್ ಪಿಸಿ.. ಸರ್ಕಾರಕ್ಕೆ ವಿದ್ಯಾರ್ಥಿಗಳಿಂದ ಧನ್ಯವಾದ

ಪಟ್ಟಣದ ಶಾ/ಎಸ್.ಪಿ.ಓಸ್ವಾಲ್ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆಯ ಬಳಿಕ ಮಾಧ್ಯಮದವರೊಂದಿಗೆ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ.

Muddebiha students
ಮುದ್ದೇಬಿಹಾಳ ವಿದ್ಯಾರ್ಥಿಗಳು
author img

By

Published : Jun 23, 2021, 4:28 PM IST

Updated : Jun 23, 2021, 4:43 PM IST

ಮುದ್ದೇಬಿಹಾಳ(ವಿಜಯಪುರ): ಒಂದು ಕಡೆ ಮನೆಯಲ್ಲಿ ಬಡತನ, ಮತ್ತೊಂದೆಡೆ ಹಳ್ಳಿಗಳಲ್ಲಿ ಸರಿಯಾಗಿ ಇಂಟರ್​ಟ್ ಸಿಗುತ್ತಿರಲಿಲ್ಲ. ಇದೀಗ ಸರ್ಕಾರ ನಮಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿ ಗಳನ್ನು ಕೊಟ್ಟಿರುವುದು ತುಂಬಾ ಅನುಕೂಲವಾಗಲಿದೆ ಎಂದು ಪದವಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಮುದ್ದೇಬಿಹಾಳ ವಿದ್ಯಾರ್ಥಿಗಳು

ಓದಿ: ಡಿಜಿಟಲ್ ಕಲಿಕಾ ಯೋಜನೆಯಿಂದ ಉನ್ನತ ಶಿಕ್ಷಣದ ಚಿತ್ರಣ ಬದಲಾಗಲಿದೆ : ಸಿಎಂ ಬಿಎಸ್​ವೈ

ಪಟ್ಟಣದ ಶಾ/ಎಸ್.ಪಿ.ಓಸ್ವಾಲ್ ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ಪಡೆದ ಬಳಿಕ ಮಾಧ್ಯಮದವರೊಂದಿಗೆ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. ಬಡವರಿಗೆ ಮೊಬೈಲ್ ಖರೀದಿಸುವುದು ಕಷ್ಟವಾಗುತ್ತಿತ್ತು. ವಿದ್ಯಾರ್ಥಿಗಳ ಕಷ್ಟ ನೋಡಿ ಉಚಿತವಾಗಿ ಟ್ಯಾಬ್ಲೆಟ್ ಗಳನ್ನು ಕೊಟ್ಟಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಬಳಿಕ ಮಾತನಾಡಿದ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ, ಕೊರೊನಾ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಮೈ ಮರೆತರೆ ಮತ್ತೆ ಅಪಾಯ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಕ್ಷೇತ್ರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಉಚಿತವಾಗಿ ಒದಗಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಬಿ. ಹೊಸಮನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಪಿಎಸ್​ಐ ಎಂ.ಬಿ. ಬಿರಾದಾರ ಇತರರು ಇದ್ದರು.

Last Updated : Jun 23, 2021, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.