ಮುದ್ದೇಬಿಹಾಳ: ಸೇನೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ, ಮಂಗಳವಾರ ತವರಿಗೆ ಆಗಮಿಸಿದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು.
ತಾಲೂಕಿನ ನಾಲತವಾಡ ಪಟ್ಟಣದ ದೇಶಮುಖ ಕಾಲೋನಿಯ ಯೋಧ ರಾಘವೇಂದ್ರ ಸಂಗಪ್ಪ ಕ್ಷತ್ರಿ ಎಆರ್‌ಸಿ ವಿಭಾಗದಲ್ಲಿ ದೇಶದ ಬಬನ್, ಭಾನಗಡಿ, ಲಡಾಕ್, ದೆಹಲಿ, ಜಮ್ಮುಕಾಶ್ಮೀರದ ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ:ಮುದ್ದೇಬಿಹಾಳ: ಮೀಸಲಾತಿಗಾಗಿ ಮತ್ತೆ ಬೀದಿಗಿಳಿದ ಪಂಚಮಸಾಲಿಗಳು
ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್ನಿಂದ ತೆರೆದ ವಾಹನದಲ್ಲಿ ಗಣಪತಿ ಸರ್ಕಲ್‌ವರೆಗೂ ಅದ್ಧೂರಿ ಮೆರವಣಿಗೆಯ ಮೂಲಕ ರಾಘವೇಂದ್ರ ಅವರನ್ನು ಪುಷ್ಪವೃಷ್ಟಿಗೈಯ್ದು ಕರೆತರಲಾಯಿತು. ಇದಕ್ಕೂ ಮೊದಲು ಮಹಿಳೆಯರು ವೀರಯೋಧನಿಗೆ ಆರತಿ ಬೆಳಗಿಸಿ, ತಿಲಕವನ್ನಿಟ್ಟು ತವರಿಗೆ ಸ್ವಾಗತಿಸಿದರು.
ಇದೇ ವೇಳೆ ಮಾಜಿ ಸಚಿವ ದಿ.ಜಗದೇವರಾವ್ ದೇಶಮುಖ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.