ETV Bharat / state

ಅತ್ತೆ-ಸೊಸೆ ಸ್ಪರ್ಧೆಯಿಂದ ರಂಗೇರಿತು ಕೊಡಗಾನೂರ ಗ್ರಾಮ ಪಂಚಾಯಿತಿ​ ಚುನಾವಣೆ! - ಮುದ್ದೇಬಿಹಾಳ ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 6ರಲ್ಲಿ ಅತ್ತೆ ಗಂಗಮ್ಮ ಪಾಟೀಲ್ ಸ್ಪರ್ಧಿಸಿದ್ದರೆ, ಅದೇ ವಾರ್ಡ್​ನಲ್ಲಿ ಸೊಸೆ ನಿರ್ಮಲಾ ಬಸನಗೌಡ ಪಾಟೀಲ್ ಕಣಕ್ಕಿಳಿದಿಳಿದ್ದಾರೆ. ಇಬ್ಬರೂ ಗೆಲುವಿನ ವಿಶ್ವಾಸ ಹೊಂದಿದ್ದಾರೆ.

Mother in law, daughter in law to contest in GP election
ಗ್ರಾ.ಪಂ ಚುನಾವಣೆ: ಅಖಾಡಕ್ಕಿಳಿದ ಅತ್ತೆ ಸೊಸೆ
author img

By

Published : Dec 17, 2020, 2:36 PM IST

Updated : Dec 17, 2020, 3:15 PM IST

ಮುದ್ದೇಬಿಹಾಳ: ದಿನದಿಂದ ದಿನಕ್ಕೆ ಗ್ರಾಮ ಪಂಚಾಯಿತಿ ಪ್ರಚಾರದ ಭರಾಟೆ ಜೋರಾಗಿದೆ. ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾ.ಪಂ. ವ್ಯಾಪ್ತಿಯ ಲಕ್ಕುಂಡಿ ಗ್ರಾಮದಲ್ಲಿ ಅತ್ತೆಗೆ ಸೊಸೆಯೇ ಸವಾಲು ಹಾಕಿದ್ದಾಳೆ.

ಗ್ರಾ.ಪಂ ಚುನಾವಣೆ: ಅಖಾಡಕ್ಕಿಳಿದ ಅತ್ತೆ ಸೊಸೆ

ಲಕ್ಕುಂಡಿ ಗ್ರಾಮದ ವಾರ್ಡ್ ಸಂಖ್ಯೆ 6ರಲ್ಲಿ ಗಂಗಮ್ಮ ಪಾಟೀಲ್ ಅತ್ತೆ ಸ್ಪರ್ಧಿಸಿದ್ದರೆ, ಅದೇ ವಾರ್ಡ್​ನಲ್ಲಿ ಸೊಸೆ ನಿರ್ಮಲಾ ಬಸನಗೌಡ ಪಾಟೀಲ್ ಕಣದಲ್ಲಿದ್ದಾರೆ. ಇಬ್ಬರೂ ಗೆಲುವಿನ ವಿಶ್ವಾಸ ಹೊಂದಿದ್ದಾರೆ.

ಪ್ರತ್ಯೇಕವಾಗಿ ಮತಯಾಚನೆ: ಲಕ್ಕುಂಡಿ ಗ್ರಾಮದ ಪ್ರತೀ ಮನೆಗೆ ಭೇಟಿ ಕೊಡುತ್ತಿರುವ ಅತ್ತೆ -ಸೊಸೆ ಪ್ರತ್ಯೇಕವಾಗಿ ಮತಬೇಟೆಯಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ತಮ್ಮನ್ನು ಚುನಾಯಿಸುವಂತೆ ಕೈ ಮುಗಿದು ಮನವೊಲಿಸುತ್ತಿದ್ದಾರೆ.

ಸದ್ಯಕ್ಕೆ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿರುವ ಅತ್ತೆ-ಸೊಸೆ ಈ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಶೇಷವೆಂದರೆ ನಿರ್ಮಲಾ ಪಾಟೀಲ್​ ಕೊಡಗಾನೂರ ಗ್ರಾ.ಪಂ.ನಲ್ಲಿ ಐದು ವರ್ಷ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ಅವರ ಪತಿ ಬಸನಗೌಡ ಅವರು ಕೂಡ ಐದು ವರ್ಷ ಸದಸ್ಯರಾಗಿ ಆಡಳಿತ ನಡೆಸಿದ್ದಾರೆ.

Last Updated : Dec 17, 2020, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.