ETV Bharat / state

ವಿಜಯಪುರ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ, ಇಬ್ಬರು ಮಕ್ಕಳು ಸಾವು - ವಿಜಯಪುರ ಜಿಲ್ಲೆಯ ಖೇಡಗಿ ಗ್ರಾಮ

ಬಟ್ಟೆ ತೊಳೆಯಲು ಹೋದ ತಾಯಿ ಹಾಗೂ ಇಬ್ಬರು ಮಕ್ಕಳು ಭೀಮಾ ನದಿಯಲ್ಲಿ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಖೇಡಗಿ ಗ್ರಾಮದಲ್ಲಿ ನಡೆದಿದೆ.

Three people died in Bhima river
ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ತಾಯಿ, ಇಬ್ಬರು ಮಕ್ಕಳು ಸಾವು!
author img

By

Published : Jun 30, 2023, 3:49 PM IST

ವಿಜಯಪುರ: ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋದ ವೇಳೆ ಕಾಲು ಜಾರಿ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಖೇಡಗಿ ಗ್ರಾಮದ ಬಳಿ ಶುಕ್ರವಾರ ಸಂಭವಿಸಿದೆ. ಗೀತಾ ಹೊನ್ನೂರ (38), ಶೋಭಿತಾ (12) ಹಾಗೂ ವಾಸುದೇವ (10) ಮೃತರು.

ತಾಯಿ ಗೀತಾ ಬಟ್ಟೆ ತೊಳೆಯುವಾಗ ವಾಸುದೇವ ನದಿಗೆ ಇಳಿದಿದ್ದಾನೆ. ಇದನ್ನು ಕಂಡು ಸಹೋದರಿ ಶೋಭಿತಾ ತಮ್ಮನನ್ನು ಕಾಡಾಡಲು ಹೋಗಿದ್ದು ಇಬ್ಬರಿಗೂ ಈಜಲು ಬಾರದೇ ಮುಳುಗುತ್ತಿದ್ದರು. ಮಕ್ಕಳನ್ನು ಉಳಿಸಲು ಹೋಗಿ ತಾಯಿ ಮತ್ತು ಇಬ್ಬರು ಮಕ್ಕಳು ನದಿನೀರು ಪಾಲಾಗಿದ್ದಾರೆ ಎಂದು ತಿಳಿದಿದೆ. ಇಂಡಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಾ‌ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಾವು: ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಪ್ರಾಧ್ಯಾಪಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೀರ್ಥ ಮತ್ತೂರು ಗ್ರಾಮದ ಸಮೀಪದಲ್ಲಿ ಇತ್ತೀಚೆಗೆ ಜರುಗಿತ್ತು. ಮೃತರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಪಿಯು ಕಾಲೇಜಿನ ಪ್ರಾಧ್ಯಾಪಕರಾದ ಪುನೀತ್​​ (36) ಹಾಗೂ ಬಾಲಾಜಿ (36) ಎಂದು ಗುರುತಿಸಲಾಗಿದೆ.

ಪ್ರವಾಸಕ್ಕೆಂದು ಬಂದಿದ್ದ ಪುನೀತ್​ ಹಾಗೂ ಬಾಲಾಜಿ ಅವರು ತೀರ್ಥಹಳ್ಳಿಯ ಯೋಗಾ ನರಸಿಂಹ ಮಠದ ಸಮೀಪದ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ತಿಂಡಿ ತಿಂದು ನದಿಯಲ್ಲಿ ಈಜಲು ಹೋಗಿದ್ದರು. ನದಿಗಿಳಿದ ಪುನೀತ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಇವರನ್ನು ರಕ್ಷಿಸಲು ಹೋದ ಬಾಲಾಜಿ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಐವರು ನೀರು ಪಾಲು

ನೀರಿನಲ್ಲಿ ಮುಳುಗಿ ಮೂವರು ಸಾವು: ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೂವರು ನೀರು ಪಾಲಾಗಿದ್ದ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಗುಬ್ಬಿ ಕೆರೆಯಲ್ಲಿ‌ ಇತ್ತೀಚೆಗೆ ನಡೆದಿತ್ತು. ಸಾರಾಯಿಪಾಳ್ಯದಿಂದ‌‌ ದೊಡ್ಡ ಗುಬ್ಬಿ ಕೆರೆಗೆ ಬಂದಿದ್ದ ಐವರು ಯುವಕರಲ್ಲಿ ಇಮ್ರಾನ್ ಪಾಷಾ, ಮುಬಾರಕ್, ಶಾಹೀದ್ ಎಂಬುವರು ನೀರಿನಲ್ಲಿ ಮುಳುಗಿದ್ದರು. ಯವಕರ ಮೃತದೇಹ ಪತ್ತೆಗಾಗಿ ಸ್ಥಳಕ್ಕೆ ದೌಡಾಯಿಸಿದ್ದ ಅಗ್ನಿಶಾಮಕ‌ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಇನ್ನಿಬ್ಬರಾದ ಅಬ್ದುಲ್ ರೆಹಮಾನ್ ಮತ್ತು ಶಾಹೀಲ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗೆಳೆಯರನ್ನು ಒಗ್ಗೂಡಿಸಿಕೊಂಡು ಬಾಡಿಗೆ‌ ಆಟೋ ಮಾಡಿ ಕೆರೆ ಬಳಿ ಬಂದಿದ್ದಾರೆ. ಮುಬಾರಕ್ ಹಾಗೂ ಶಾಹೀದ್​ಗೆ ಈಜು ಬರದೇ ಇದ್ದರೂ‌ ಇಮ್ರಾನ್ ಬಲವಂತವಾಗಿ ನೀರಿಗಿಳಿಯುವಂತೆ ಮಾಡಿದ್ದನಂತೆ. ಬಳಿಕ ಈಜಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೀರಿನಲ್ಲಿ ಮುಳುಗಿದ್ದರು. ಇನ್ನೂ ದಡದಲ್ಲಿದ್ದ ಇಬ್ಬರು ಶಾಹೀಲ್ ಹಾಗೂ ಅಬ್ದುಲ್ ಪೋಷಕರಿಗೆ ಮತ್ತು ಪೊಲೀಸರಿಗೆ ಕರೆ‌ ಮಾಡಿ ವಿಷಯ ತಿಳಿಸಿದ್ದರು.

ಇದನ್ನೂ ಓದಿ: ಮೈಸೂರು: ಲಕ್ಷ್ಮಣ ತೀರ್ಥ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.