ವಿಜಯಪುರ: ಸಾಮಾಜಿಕ ಅಂತರ ಮರೆತು ಕೆಎಸ್ಆರ್ಟಿಸಿ ಬಸ್‌ನಲ್ಲಿ ವಿಜಯಪುರ ನಗರದಿಂದ ಜನರನ್ನು ತುಂಬಿಸಿಕೊಂಡು ಹೋಗಲಾಗಿದೆ. ಗರಿಷ್ಟ ಮೂವತ್ತು ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಉಲ್ಲಂಘನೆ ಮಾಡಿ, ಎಲ್ಲಾ ಸೀಟ್ಗಳಲ್ಲಿಯೂ ಪ್ರಯಾಣಿಕರನ್ನು ಕಂಡಕ್ಟರ್ ಕೂರಿಸಿದ್ದಾರೆ.
ನಗರದಿಂದ ಕನಮಡಿ ಗ್ರಾಮಕ್ಕೆ, ಬಸ್ತಿಕೋಟಾ ತಾಲೂಕಿನ ಕನಮಡಿ ಗ್ರಾಮಗಳ ಮೂಲಕ ಹಾಯ್ದು ಹೋದ ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಮೇಲಧಿಕಾರಿಗಳ ನಿರ್ದೇಶಕದ ಮೇರೆಗೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಿದ್ದಾಗಿ ಬಸ್ ನಿರ್ವಾಹಕ ಸಮರ್ಥನೆ ಮಾಡಿಕೊಂಡಿದ್ದಾನೆ. ಇನ್ನು ಡಿಪೋ ಮ್ಯಾನೇಜರ್ ಆನಂದ ಹೂಗಾರ ನಿರ್ದೇಶನದ ಮೇರೆಗೆ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಿದ್ದಾಗಿ ಹೇಳಿದ್ದಾರೆ. ಬಸ್‌ನಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಾಟ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.