ಮುದ್ದೇಬಿಹಾಳ(ವಿಜಯಪುರ): ಮಂಗಳೂರು-ಉಡುಪಿಯಿಂದ ಗುರುವಾರ ಒಟ್ಟು 7 ಬಸ್‌ಗಳಲ್ಲಿ ಅಂದಾಜು 200ಕ್ಕೂ ಹೆಚ್ಚು ಕಾರ್ಮಿಕರು ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಆಗಮಿಸಿದರು. ತಾಲೂಕಿನ ನಾಗರಬೆಟ್ಟ, ನಾಲತವಾಡ, ಶಿರೋಳ, ಅರಸನಾಳ, ಡೊಂಕಮಡು, ಖಿಲಾರಹಟ್ಟಿ, ತಿಳಗೂಳ, ಬಿಜ್ಜೂರ, ಹಿರೂರ, ಕೋಳೂರ, ಸಾಸನೂರ, ಬಂಗಾರಗುಂಡ, ದೇವೂರ, ಬಳವಾಟ ಸೇರಿದಂತೆ ಹಲವು ಗ್ರಾಮಗಳ ಕಾರ್ಮಿಕರು ಆಗಮಿಸಿದರು.
ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಮಿಕರಿಗೆ ಶಾಸಕರಿಂದ ದಿನಸಿ ಕಿಟ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಈ ವೇಳೆ ವಲಸೆ ಕಾರ್ಮಿಕರಿಗೆ 15 ದಿನ ಹೋಮ್ ಕ್ವಾರಂಟೈನ್‌ಲ್ಲಿರುವಂತೆ ಸೂಚಿಸಲಾಯಿತು.
ಈ ವೇಳೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಶಾಸಕರ ಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ, ತಹಸೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಘಮೋಡೆ, ಮುಖ್ಯಾಧಿಕಾರಿ ಗೋಪಾಲ ಕಾಸೆ, ಸಾರಿಗೆ ವ್ಯವಸ್ಥಾಪಕ ರಾಹುಲ್ ಹೊನಸೂರೆ, ಡಾ. ಸತೀಶ ತಿವಾರಿ, ಪಿಎಸ್ಐ ಮಲ್ಲಪ್ಪ ಮಡ್ಡಿ, ಆರೋಗ್ಯ ಸಹಾಯಕ ಎಂ.ಎಸ್.ಗೌಡರ ಸೇರಿದಂತೆ ಇತರರು ಇದ್ದರು.