ಮುದ್ದೇಬಿಹಾಳ(ವಿಜಯಪುರ): ಗೋವಾದಲ್ಲಿ ಸಿಲುಕಿರುವ ಮುದ್ದೇಬಿಹಾಳ ಕೂಲಿ ಕಾರ್ಮಿಕರನ್ನು ಕರೆತರಲು ಗೋವಾ ಗಡಿಗೆ ಶುಕ್ರವಾರ ಪ್ರಯಾಣ ಬೆಳೆಸಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ರಾತ್ರಿ ಚಕ್ಪೋಸ್ಟ್ನಲ್ಲೇ ನಿದ್ದೆ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ.
![MLA Patila nadahalli](https://etvbharatimages.akamaized.net/etvbharat/prod-images/7132872_828_7132872_1589042283563.png)
ಗೋವಾಗೆ ವಲಸೆ ಹೋಗಿರುವ ಮುದ್ದೇಬಿಹಾಳ ತಾಲೂಕಿನ ಕಾರ್ಮಿಕರನ್ನು ಚೊರ್ಲಾ ಖಾನಾಪುರ ಚಕ್ಪೋಸ್ಟ್ನಿಂದ ಮುದ್ದೇಬಿಹಾಳದ ತಮ್ಮ ತಮ್ಮ ಸ್ವಗ್ರಾಮಕ್ಕೆ ಕರೆತರಲು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅಧಿಕಾರಿಗಳೊಂದಿಗೆ ತೆರಳಿದ್ದಾರೆ. ಆದರೆ ಕಾರಣಾಂತರಗಳಿಂದ ವ್ಯವಸ್ಥೆ ತಡವಾದ್ದರಿಂದ ಚಕ್ಪೋಸ್ಟ್ ರಸ್ತೆಬದಿಯ ಅಂಗಡಿ ಮುಂದೆ ನಿದ್ರಿಸಿದ್ದಾರೆ. ಕಾರ್ಮಿಕರ ಪ್ರಯಾಣ ಪ್ರಕ್ರಿಯೆಯನ್ನು ನಿರ್ವಹಿಸಿ 350 ಕ್ಕೂ ಅಧಿಕ ಕಾರ್ಮಿಕರನ್ನು ತಮ್ಮ ಸ್ವಗ್ರಾಮಗಳಿಗೆ ಬರುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ನಡಹಳ್ಳಿ ಅವರೊಂದಿಗೆ ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಇನ್ನಿತರರು ತೆರಳಿದ್ದರು.
![MLA Patila nadahalli](https://etvbharatimages.akamaized.net/etvbharat/prod-images/7132872_158_7132872_1589042336431.png)