ETV Bharat / state

ಡಿಸಿಎಂ ಕಾರಜೋಳ ಪುತ್ರನಿಂದ ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ತಡೆ : ಶಾಸಕ ಚೌಹಾಣ್ - Vijaypur

ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಡಿಸಿಎಂ ಕಾರಜೋಳ ಪುತ್ರ ಗೋಪಾಲ ಕಾರಜೋಳ ತಡೆಯೊಡ್ಡುತ್ತಿದ್ದಾರೆ ಎಂದು ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ..

MLA Devanand Chavan allegations
ಶಾಸಕ ದೇವಾನಂದ ಚವ್ಹಾಣ
author img

By

Published : Oct 28, 2020, 1:48 PM IST

ವಿಜಯಪುರ: ನಾಗಠಾಣ ಕ್ಷೇತ್ರ ಅಭಿವೃದ್ಧಿ ಕಾರ್ಯಗಳಲ್ಲಿ ಡಿಸಿಎಂ ಪುತ್ರ ಗೋಪಾಲ ಕಾರಜೋಳ ಹಸ್ತಕ್ಷೇಪ ಮಾಡಿ ಕಾಮಗಾರಿ ತಡೆ ಹಿಡಿಯುತ್ತಿದ್ದಾರೆ ಎಂದು ಶಾಸಕ ದೇವಾನಂದ ಚೌಹಾಣ್ ಆರೋಪಿದರು‌.

ಕಾರಜೋಳ ಪುತ್ರ ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ತಡೆಯೊಡ್ಡುತ್ತಿದ್ದಾರೆ : ಶಾಸಕ ದೇವಾನಂದ ಚೌಹಾಣ್

ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಠಾಣ ಕ್ಷೇತ್ರದಲ್ಲಿ ನನ್ನ ವಿರುದ್ಧ ಡಿಸಿಎಂ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಸೋತಿರುವುದಕ್ಕೆ, ಪರೋಕ್ಷವಾಗಿ ನನ್ನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಅಭಿವೃದ್ಧಿ ಕಾಮಗಾರಿಗಳನ್ನ ತಡೆ ಹಿಡಿದ್ದಾರೆ ಎಂದು ಆರೋಪಿಸಿದರು‌.

ಇನ್ನು, ಕಳೆದ ಒಂದುವರೆ ವರ್ಷದಿಂದ ರಾಜ್ಯದ ಆಯಾ ಕ್ಷೇತ್ರದಲ್ಲಿ 30ರಿಂದ 50 ಕೋಟಿ ರೂ. ಅಭಿವೃದ್ಧಿಗೆ ಕಾರ್ಯಗಳಿಗೆ ಹಣ ಬಿಡುಗಡೆಯಾಗಿದೆ‌‌. ಆದರೆ, ನನ್ನ ಕ್ಷೇತ್ರಕ್ಕೆ ಬರುವ ಅನುದಾನವನ್ನು ಡಿಸಿಎಂ ಕಾಜೋಳ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು‌.

ನಮ್ಮ ಕ್ಷೇತ್ರದ ತಳಮಟ್ಟದಿಂದ ಮೇಲ್ಮಟ್ಟದ ಎಲ್ಲ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ, ಆಹಾರ ಇಲಾಖೆ ಸೇರಿದಂತೆ ಎಲ್ಲ ಕಡೆಗಳಲ್ಲೂ ಅಧಿಕಾರ ಚಲಾಯಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರಕ್ಕೆ ಬರುವ ನೂರಾರು ಕೋಟಿ ಅನುದಾನ ತಡೆ ಹಿಡಿಯಲಾಗಿದೆ.

ಅಲಿಯಾಬಾದ ದ್ಯಾಬೇರಿ ರಸ್ತೆ ಅನುದಾನ, ಕುಡಿಯುವ ನೀರು ವಿಚಾರದಲ್ಲಿ ಡಿಸಿಎಂ ರಾಜಕಾರಣ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಬಂದ್ ಮಾಡಲಾಗಿದೆ. ಅವರೇ ಕೆಲಸ ಮಾಡುತ್ತೇನೆ ಎಂದರೆ ನಾನೇ ಕೊಟ್ಟು ಬಿಡುತ್ತೇನೆ. ಅವರೆ ಅಭಿವೃದ್ಧಿ ಕೆಲಸ ಮಾಡಲಿ ಎಂದರು.

ನೆರೆ ಪರಿಸ್ಥಿತಿಯಲ್ಲಿ ಕೂಡ ಐದು ಪೈಸೆ ಸಹಕಾರ ಸಿಕ್ಕಿಲ್ಲ. ನೆರೆ ಸರ್ವೇಯಲ್ಲಿ ಲೋಪದೋಷಗಳು ನಡೆಯುತ್ತಿವೆ. ಚಡಚಣ ತಾಲೂಕನ್ನು ಅತಿವೃಷ್ಟಿ ಹಾಗೂ ಅನಾವೃಷ್ಟಿ ಸರ್ವೇ ಪಟ್ಟಿಯಿಂದ ಹೊರಗಟ್ಟಿದ್ದಾರೆ. ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಡಿಸಿಎಂ ಕಾರಜೋಳ ನಾಗಠಾಣ ಕ್ಷೇತ್ರದಲ್ಲಿ ಚೇಲಾಗಳ ಮಾತು ಕೇಳುತ್ತಿದ್ದಾರೆ ಎಂದು ದೂರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.