ETV Bharat / state

ಕಾಂಗ್ರೆಸ್-ಜೆಡಿಎಸ್​ನ ಹಲವು ಶಾಸಕರು ಬಿಜೆಪಿ ಸೇರಲು ಸಂಪರ್ಕದಲ್ಲಿದ್ದಾರೆ : ಶಾಸಕ ಯತ್ನಾಳ್

ಯುಗಾದಿಯೊಳಗಾಗಿ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಅಥವಾ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಸಿಎಂ ಬೊಮ್ಮಾಯಿ ತುಂಬಬಹುದು. ಏನೇ ಆಗಲಿ ಯುಗಾದಿಗೆ ಸಿಹಿ ಸುದ್ದಿ ಹೊರಬೀಳಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ..

mla-basanagowda-patil-yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್
author img

By

Published : Jan 25, 2022, 4:45 PM IST

ವಿಜಯಪುರ : ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಯಾಗಿ ತಮಗೂ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಹಲವು ಶಾಸಕರು ಪಕ್ಷ ಸೇರಲು ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆಲವರು ಬಿಜೆಪಿ ಬಿಟ್ಟು ಹೋಗುವವರು ಸಹ ಇದ್ದಾರೆ. ಅವರಲ್ಲಿ ವಿಜಯಪುರ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರು ಇದ್ದಾರೆ. ಅವರು ಈಗಾಗಲೇ ಕಾಂಗ್ರೆಸ್ ಶಾಸಕರೊಂದಿಗೆ ಗುಸು ಗುಸು ಪಿಸುಪಿಸು ನಡೆಸಿದ್ದಾರೆ ಎಂದರು.

ಪಕ್ಷಾಂತರ ಪರ್ವದ ಕುರಿತಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿರುವುದು..

ಸಂಪುಟ ವಿಸ್ತರಣೆ ಯುಗಾದಿಗೆ : ಯುಗಾದಿಯೊಳಗಾಗಿ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಅಥವಾ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಸಿಎಂ ಬೊಮ್ಮಾಯಿ ತುಂಬಬಹುದು. ಏನೇ ಆಗಲಿ ಯುಗಾದಿಗೆ ಸಿಹಿ ಸುದ್ದಿ ಹೊರಬೀಳಲಿದೆ. ಈ ಬಾರಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ದೊರೆಯುವುದು ಪಕ್ಕಾ ಆಗಿದೆ ಎಂದರು.

ವಿಜಯಪುರ, ಚಾಮರಾಜನಗರ, ಮೈಸೂರು, ಯಾದಗಿರಿ, ಕಲಬುರ್ಗಿ, ಕೊಡುಗು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಅವುಗಳಿಗೆ ಸೂಕ್ತ ಸ್ಥಾನಮಾನ, ಜಾತಿ ಆಧಾರದ ಮೇಲೆ ಎಲ್ಲ ಜಾತಿಯವರಿಗೂ ಸೂಕ್ತ ಅವಕಾಶ ನೀಡಬೇಕು ಎಂದರು.

ಗುಪ್ತ ಮೀಟಿಂಗ್ ನಡೆದಿಲ್ಲ : ನಾನು ಶಾಸಕರಾದ ರೇಣುಕಾಚಾರ್ಯ, ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲಾಗಲಿ, ಸಚಿವ ಉಮೇಶ ಕತ್ತಿ ಅವರು ಬೆಳಗಾವಿಯಲ್ಲಿಯಾಗಲಿ ಗುಪ್ತಸಭೆ ನಡೆಸಿಲ್ಲ. ಇದರಲ್ಲಿ ಯಾವುದೇ ಪಕ್ಷ ವಿರೋಧ, ಪಕ್ಷಕ್ಕೆ ದ್ರೋಹ ಮಾಡುವಂತಹ ಮಾತುಕತೆ ನಡೆದಿಲ್ಲ.

ಕೇವಲ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. 130ಕ್ಕೂ ಹೆಚ್ಚು ಸೀಟು ಪಡೆದುಕೊಳ್ಳಲು ಕಾರ್ಯತಂತ್ರ ಕುರಿತು ಚರ್ಚೆ ನಡೆಸಲಾಗಿದೆ. ಇವೆಲ್ಲ ಗುಪ್ತ ಸಭೆಯಾಗಲಿ, ಬಹಿರಂಗ ಸಭೆಗಳಾಗಲಿ ಅಲ್ಲ ಎಂದರು.

ಸದ್ಯ ಯಾರೇ ಸಚಿವರನ್ನಾಗಲಿ ಮಾಡಲಿ, ಅವರಿಗೆ ಕನಿಷ್ಟ ಒಂದೂವರೆ ವರ್ಷವಾದರೂ ಅವಧಿ ಬೇಕಾಗುತ್ತದೆ. ಕೇವಲ ಆರು ತಿಂಗಳು ಕಾಲಾವಧಿ ದೊರೆತರೆ ಏನು ಪ್ರಯೋಜನವಿಲ್ಲ. ಅಧಿಕಾರಿ ವರ್ಗ ಇದರ ಲಾಭ ಪಡೆಯಬಹುದು ಅಷ್ಟೇ.. ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕ: ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡಬೇಕಾಗಿದೆ. ಕೇವಲ ಕೆಜೆಪಿಯಿಂದ ಬಂದವರೇ ಹೆಚ್ಚು ಅಧಿಕಾರದಲ್ಲಿದ್ದಾರೆ. ಮೂಲ ಬಿಜೆಪಿಯವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಅವರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಮೂಲಕ ಮಾಜಿ ಬಿಎಸ್​ವೈ ಅವರನ್ನು ಮಾತಿನಲ್ಲಿ ತಿವಿದರು.

ಉಸ್ತುವಾರಿ ಬದಲಾವಣೆ : ಸಚಿವೆ ಶಶಿಕಲಾ ಜೊಲ್ಲೆ ಉತ್ತಮ ಕೆಲಸ ಮಾಡುತ್ತಿದ್ದರು. ಅವರನ್ನು ನಾನು ಎಂದು ಟೀಕಿಸಿಲ್ಲ ಎಂದು ಶಾಸಕ ಯತ್ನಾಳ್ ಸ್ಪಷ್ಟಪಡಿಸಿದರು. ಈಗ ಹಿರಿಯರಾದ ಉಮೇಶ ಕತ್ತಿಯವರನ್ನು ವಿಜಯಪುರ ಉಸ್ತುವಾರಿ ಮಾಡಿದ್ದಾರೆ. ಅವರಿಂದ ಜಿಲ್ಲೆಯ ಅಭಿವೃದ್ಧಿಗೆ ಸಹಾಯವಾಗಬಹುದು ಎಂದರು.

ನಿರಾಣಿ ಪೀಠ : ಪಂಚಮಸಾಲಿ ಒಕ್ಕೂಟದ ಮೂರನೇ ಪೀಠ ಹಾಗೂ ಹರಿಹರ ಪೀಠ ಸಚಿವ ಮುರುಗೇಶ ನಿರಾಣಿ ಪೀಠವಾಗಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕಿಡಿಕಾರಿದರು. 3ನೇ ಪೀಠ ಸ್ಥಾಪನೆಯಾಗುತ್ತಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಅದರಿಂದ ಸಮಾಜ ಒಡೆಯುವುದಿಲ್ಲ. ಸಮಾಜದ ಜನರಿಗೆ ಗೊತ್ತಿದೆ. ಯಾವ ಪೀಠ ರಾಜಕೀಯ ಮಾಡುತ್ತಿದೆ ಎಂದರು.

ಕೂಡಲಸಂಗಮ ಪೀಠ ಅಸಂವಿಧಾನಿಕವಾಗಿದೆ ಎನ್ನುವ ಸ್ವಾಮೀಜಿಗಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಮೊದಲು ಪೀಠ ಸ್ಥಾಪನೆಯಾಗಿದ್ದೆ ಕೂಡಲಸಂಗಮದಲ್ಲಿ, ಕಾವಿಧಾರಿಗಳು ನಿರಾಣಿ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ.‌ ಮೂರು ಅಲ್ಲ, ಎಷ್ಟೇ ಪೀಠವಾದರೂ ಏನು ಆಗುವುದಿಲ್ಲ ಎಂದು ಹೇಳಿದರು.

ಓದಿ: ಹೈಕಮಾಂಡ್ ಒಪ್ಪಿದ್ರೆ ಕಾಂಗ್ರೆಸ್​ನ 16 ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ‌ ಹೊಸ ಬಾಂಬ್​!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.