ವಿಜಯಪುರ: ಬಹಿರ್ದೆಸೆಗೆಂದು ಹೋಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ.
ಶಂಕುತಲಾ ಕಾಂಬಳೆ (40) ಮೃತ ಮಹಿಳೆ. ಸೆ.17 ರಂದು ರಾತ್ರಿ 9 ಗಂಟೆಗೆ ಮಹಿಳೆ ಬಹಿರ್ದೆಸೆಗೆ ಹೋಗಿದ್ದಳು ಎನ್ನಲಾಗುತ್ತಿದ್ದು, ಮನೆಯವರು ಹುಡುಕಾಟ ನಡೆಸಿದ್ರು ಕೂಡ ಮಹಿಳೆ ಮನೆಗೆ ವಾಪಸ್ ಬಂದಿಲ್ಲ.
ಇಂದು ಬೆಳಗಿನ ಸಮಯಲ್ಲಿ ಹಂಜಗಿ ಗ್ರಾಮದ ಹೊರ ವಲಯದಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಬಹಿರ್ದೆಸೆಗೆ ಹೋದ ಸಮಯದಲ್ಲಿ ಮಹಿಳೆಯನ್ನು ಯಾರಾದರೂ ಕೊಲೆ ಮಾಡಿದ್ರಾ?, ಅಥವಾ ಸಹಜವಾಗಿ ಸಾವನ್ನಪ್ಪಿದ್ದಳಾ? ಎಂಬ ಶಂಕೆ ವ್ಯಕ್ತವಾಗಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.