ETV Bharat / state

ಕೇವಲ ರಾಜಕೀಯ ಗಿಮಿಕ್ ಮಾಡಲು ಮರುನಾಮಕರಣ ಮಾಡೋದು ತಪ್ಪು: ಸಚಿವ ಶಿವಾನಂದ ಪಾಟೀಲ್ - Shivanand Patil React on Name Change

ಬಸವ ಜಿಲ್ಲೆ ಎಂದು ಮರುನಾಮಕರಣ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಶಿವಾನಂದ ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Minister Sivananda Patil's opinion on the renaming of Vijayapur district

author img

By ETV Bharat Karnataka Team

Published : Oct 28, 2023, 1:35 PM IST

Updated : Oct 28, 2023, 5:25 PM IST

ಸಚಿವ ಶಿವಾನಂದ ಪಾಟೀಲ್

ವಿಜಯಪುರ: ಈವರೆಗೆ ಆಳಿದ ಯಾವುದೇ ಸರ್ಕಾರವಿರಲಿ, ಬಸವಣ್ಣನ ಜನ್ಮಭೂಮಿ ಬಗ್ಗೆ ಕಾಳಜಿ ವಹಿಸದಿರುವುದು ಬೇಸರ ತರಿಸಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರು, ಸಚಿವರು ಸೇರಿ ಗುದ್ದಾಡಿ ಅನುದಾನ ತರಬೇಕಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.

ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ಮರುನಾಮಕರಣ ಮಾಡುವ ವಿಚಾರ ಸಂಬಂಧ ಶನಿವಾರ ನಗರದಲ್ಲಿ ಮಾತನಾಡಿರುವ ಅವರು, ಬಸವೇಶ್ವರರ ಹೆಸರು ಈಗಾಗಲೇ ಪ್ರಚಲಿತದಲ್ಲಿದೆ. ಬಸವಣ್ಣನವರು ಹುಟ್ಟಿದ್ದು ಇದೇ ಜಿಲ್ಲೆಯಲ್ಲಿ ಎಂಬುದು ಇಡೀ ಜಗತ್ತಿಗೆ ಗೊತ್ತು. ಆದರೆ, ಬರಿ ಹೆಸರು ಬದಲಾವಣೆ ಮಾಡುವುದರಿಂದ ಅವರ ಹಿರಿಮೆ ಮತ್ತು ಗರಿಮೆ ಪರಿಚಯಿಸೋದು ಕಷ್ಟ. ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಬೇಕಿದೆ. ಕೂಡಲಸಂಗಮ, ಬಸವ ಜನ್ಮಭೂಮಿಯೂ ಕೂಡ ಅಭಿವೃದ್ಧಿ ಆಗಿಲ್ಲ. ಅದರ ಕಡೆ ಗಮನ ಕೊಡಬೇಕೆಂದು ಒತ್ತಾಯಿಸಿದರು.

ನಾನು ಬಸವಣ್ಣನ ಅಭಿಮಾನಿ ಎಂದು ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರೆ ಅದು ಸಾಧನೆ ಆಗಲ್ಲ. ಯಾರೇ ಮುಖ್ಯಮಂತ್ರಿ ಆಗಲಿ, ಅವರ ಬಳಿ ಅಧಿಕಾರ, ಅವಕಾಶವಿದ್ದಾಗ ಬಸವಣ್ಣನ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಮಾಡಬೇಕು. ಜಗತ್ತಿಗೆ ತೋರಿಸುವ ಕೆಲಸ ಬಸವಣ್ಣನವರ ಜನ್ಮ ಸ್ಥಳದಲ್ಲಿ ಆಗಬೇಕಿದೆ. ಮರುನಾಮಕರಣ ಈ ಸಂದರ್ಭದಲ್ಲಿ ಮಾಡೋದು, ಬಸವೇಶ್ವರರ ಹೆಸರು ಜಿಲ್ಲೆಗೆ ಇಟ್ಟಮೇಲೆ ಹೆಸರು ಹೇಳೋದು ಕಷ್ಟವಾಗುತ್ತೆ. ಹಾಗಾಗಿ ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೆ ಬಸವೇಶ್ವರ ಎಂದು ಮರುನಾಮಕರಣ ಮಾಡುವ ಅವಶ್ಯಕತೆ ಇಲ್ಲ. ಕೇವಲ ರಾಜಕೀಯ ಗಿಮಿಕ್ ಮಾಡಲು ಮರುನಾಮಕರಣ ಮಾಡೋದು ಕೂಡ ತಪ್ಪು ಎಂದರು.

ರಾಜ್ಯಕ್ಕೆ ಬಸವನಾಡು ಎಂದು ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕೂಡ ಸೂಕ್ತವಾದ ವಿಚಾರವಲ್ಲ. ಈ ರೀತಿಯ ರಾಜಕೀಯ ಗಿಮಿಕ್ ಮಾಡಬಾರದು. ಯಾರನ್ನೇ ಆಗಲಿ ರಾಷ್ಟ್ರೀಯ ಪುರುಷರನ್ನು ರಾಷ್ಟ್ರೀಯ ದೃಷ್ಟಿಕೋನದಿಂದಲೇ ನೋಡಬೇಕೆ ಹೊರತು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ನನಗೆ ಇದೊಂದು ರಾಜಕೀಯ ಅಭಾಸ ಎನಿಸುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಈ ಮರುನಾಮಕರಣ ವಿಷಯ ಚರ್ಚೆಯಾಗುತ್ತಿದ್ದರೆ ಅದು ತಪ್ಪು. ನಮ್ಮವರೇ ಮಾಡಲಿ, ಬೇರೆ ಯಾರೇ ಮಾಡಲಿ ನಾನು ಮಾತ್ರ ಅದನ್ನು ಒಪ್ಪಿಕೊಳ್ಳೋದಿಲ್ಲ ಎಂದರು.

ಹೀಗೆ ಮುಂದುವರೆದರೆ ಬಸವಣ್ಣನವರ ಕರ್ಮಸ್ಥಾನ ಬೀದರ್​ನಲ್ಲಿದೆ ಅಂತ ನಾಳೆ ಬೀದರ್​ನವರು ಕೇಳಬಹುದು. ಇವೆಲ್ಲ ಒಂದಕ್ಕೊಂದು ಇತಿಹಾಸ ತಿರುಚುವ ಕೆಲಸ. ಈ ಪ್ರಯತ್ನಿಕ್ಕೆ ಕೈ ಹಾಕಬಾರದು. ಇತಿಹಾಸ ಕರೆಕ್ಟ್ ಆಗಿ ನಿರ್ಮಾಣ ಮಾಡುವಂತಹ ದಿಶೆಯಲ್ಲಿ ನಾವು ಕೆಲಸ ಮಾಡಬೇಕು. ಬಸವಣ್ಣನವರ ಕುರುಹು ಉಳಿಯುವಂತಹ ಕೆಲಸ ಮಾಡಬೇಕಿದೆ ಎಂದರು.

ಬಸವಣ್ಣನವರ ಪ್ರತ್ಯೇಕ ಪ್ರಾಧಿಕಾರ ರಚನೆ ವಿಚಾರಕ್ಕೆ, ಪ್ರತ್ಯೇಕ ಪ್ರಾಧಿಕಾರ ಮಾಡುವುದಾಗಿ ಸಿದ್ದರಾಮಯ್ಯ ಪ್ರಚಾರಕ್ಕೆ ಬಂದಾಗಲೇ ಹೇಳಿದ್ದಾರೆ. ನಾವು ಕೂಡ ಒತ್ತಾಯ ಮಾಡ್ತಿದ್ದೇವೆ. ಬರಿ ಘೋಷಣೆ ಮಾಡಿದ್ರೆ ಆಗಲ್ಲ, ಅನುದಾನ ಕೊಟ್ರೆ ಸಿಎಂಗೆ ಧನ್ಯವಾದ ಹೇಳುವೆ ಎಂದರು.

ಇದನ್ನೂ ಓದಿ: ಕರ್ನಾಟಕಕ್ಕೆ 'ಬಸವ ನಾಡು' ಎಂದು ಹೆಸರಿಡುವುದರಲ್ಲಿ ತಪ್ಪೇನಿಲ್ಲ: ಸಚಿವ ಎಂ.ಬಿ.ಪಾಟೀಲ್

Last Updated : Oct 28, 2023, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.