ಅಕ್ಕಮಹಾದೇವಿ ವಚನದ ಮೂಲಕ ಸಚಿವೆ ಜೊಲ್ಲೆ ಟಾಂಗ್ ಕೊಟ್ಟಿದ್ದು ಯಾರಿಗೆ? - ವಿಜಯಪುರದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ ಸಚಿವೆ ಶಶಿಕಲಾ ಜೊಲ್ಲೆ ಸುದ್ದಿ
ಇದೇ ವೇಳೆ, ಅಕ್ಕಮಹಾದೇವಿ ಅವರ ವಚನ ಹೇಳಿದ ಸಚಿವೆ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೆಡೆ ಎಂತಯ್ಯ ಎಂದರು. ನಾನು ರಾಜಕಾರಣ ಮಾಡುತ್ತಿದ್ದೇನೆ. ಓರ್ವ ಮಹಿಳೆಯಾಗಿ ಶಾಸಕಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಜಯಪುರ: ಖಾತೆ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವೆ ಶಶಿಕಲಾ ಜೊಲ್ಲೆ, ಕೆಲಸ ಮಾಡುವವರಿಗೆ ಮತ್ತು ಜನತೆಗೆ ನ್ಯಾಯ ಕೊಡಬೇಕಾದರೆ ಖಾತೆ ಯಾವುದಾದರೇನು ಖಾತೆ ಹಂಚಿಕೆ ಕುರಿತು ಅಸಮಾಧಾನವಿಲ್ಲ ಎಂದು ಹೇಳಿದರು.
ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಣೆ ವೇಳೆ ಸುದ್ಡಿಗಾರರೊಂದಿಗೆ ಮಾತನಾಡಿದ ಅವರು, ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ.
ಎರಡು ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಸಮಾಧಾನವಿದೆ. ಜಿಲ್ಲಾ ಉಸ್ತುವಾರಿ ಸಚಿವೆಯಾಗಿ, ಸ್ವಂತ ಕ್ಷೇತ್ರದಲ್ಲೂ ಶಾಸಕಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ನನ್ನ ಜವಾಬ್ದಾರಿಯನ್ನು ನಾನು ಸರಿಯಾಗಿ ನಿರ್ವಹಣೆ ಮಾಡಿದ್ದೇನೆ. ಈಗ ವಹಿಸಿರುವ ಖಾತೆಯ ಯೋಜನೆಗಳನ್ನು ರಾಜ್ಯದ ಜನರಿಗೆ ಮುಟ್ಟಿಸುವೆ. ಜೊತೆಗೆ ಪಕ್ಷ ಸಂಘಟನೆಯನ್ನೂ ಮಾಡುವೆ. ಖಾತೆ ಹಂಚಿಕೆಯಲ್ಲಿ ಹಿಂಬಡ್ತಿ - ಮುಂಬಡ್ತಿ ಎಂಬುವುದಿಲ್ಲ ಅದು ತಿಳಿದು ಕೊಳ್ಳುವವರ ಮೇಲೆ ಹೋಗುತ್ತದೆ. ನಮಗೆ ಸಕಾರಾತ್ಮಕ ಚಿಂತನೆ ಇರಬೇಕು ಅಷ್ಟೇ ಎಂದರು.
ಇದೇ ವೇಳೆ, ಅಕ್ಕಮಹಾದೇವಿ ಅವರ ವಚನ ಹೇಳಿದ ಸಚಿವೆ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೆಡೆ ಎಂತಯ್ಯ ಎಂದರು. ನಾನು ರಾಜಕಾರಣ ಮಾಡುತ್ತಿದ್ದೇನೆ ಓರ್ವ ಮಹಿಳೆಯಾಗಿ ಶಾಸಕಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸುವೆ ಎಂದರು.
ಓದಿ: ಪೆಗಾಸಸ್ ವಿಚಾರದಲ್ಲಿ ವಿರೋಧ ಪಕ್ಷಗಳು ಕಾಲಹರಣ ಮಾಡುತ್ತಿವೆ : ಸಂಸದ ರಾಘವೇಂದ್ರ ಕಿಡಿ