ಬೀದರ್: ಹೊಸ ವರ್ಷವನ್ನು ಸ್ವಾಗತಿಸಲು ಅಭಿಮಾನಿಗಳು ಆಯೋಜಿಸಿದ ಸಂಭ್ರಮಾಚರಣೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೆಜ್ಜೆ ಹಾಕುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡಾದ ನಿವಾಸದ ಮುಂದೆ ಅಭಿಮಾನಿಗಳು ತಡ ರಾತ್ರಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ 2021 ವರ್ಷಕ್ಕೆ ಸ್ವಾಗತಿಸಿದರು.
ಈ ವೇಳೆಯಲ್ಲಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಮನೆ ಎದುರಲ್ಲೇ ಹಾಕಲಾದ ಡಿಜೆ ಹಾಡಿಗೆ ಸಚಿವ ಪ್ರಭು ಚವ್ಹಾಣ್ ಮೈ ಮರೆತು ಹೆಜ್ಜೆ ಹಾಕಿದರು.