ವಿಜಯಪುರ: ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ಸಿಂದಗಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ವಿಧಾನಸೌಧಕ್ಕೆ ಬೀಗ ಹಾಕಿ ಪ್ರಚಾರ ಮಾಡಿರಬೇಕು. ಮೂರ್ನಾಲ್ಕು ಜನ ಸಚಿವರು ಮಾತ್ರ ಇದ್ದಾರೆ. ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಸಂಬಂಧಿಸಿದ ಸಚಿವರುಗಳು ಬಂದಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಇನ್ನು ಬಿಜೆಪಿ ಹಣ ಹಂಚಿಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ ಖಾನ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರು ತಮ್ಮ ಭಾವನೆಗಳು, ತಮ್ಮ ಹಳೆಯ ನೆನಪು ಮಾಡಿಕೊಂಡು ಹೇಳ್ತಾರೆ. ಜಮೀರ್ ಅವರು ಮೊದಲಿನಿಂದ ಅದೇ ಕರಾಮತ್ತು ಮಾಡಿಕೊಂಡು ಬಂದಿದ್ದಾರೆ ಎಂದರು. ಕುಮಾರಸ್ವಾಮಿ ಆರ್ಎಸ್ಎಸ್ ಚಡ್ಡಿ ಹಾಕಿದ್ದಾರಾ? ನೋಡಬೇಕು ಎಂಬ ಜಮೀರ್ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಸವದಿ, ಅದರ ಬಗ್ಗೆ ಕುಮಾರಸ್ವಾಮಿ ಅವರೇ ಉತ್ತರ ನೀಡಬೇಕು ಎಂದರು.
ಕಂಬಳಿ ಹಾಕೋಕೆ ಬೊಮ್ಮಾಯಿ ಕುರಿ ಕಾದಿದ್ರಾ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಕೂಡ ಹೊಲಕ್ಕೆ ಹೋಗಿದ್ದೇನೆ. ಒಕ್ಕಲುತನ ಮಾಡಿದ್ದೇನೆ. ಕುರಿ ಕಾದಿದ್ದೇನೆ ಎಂದು ಬೊಮ್ಮಾಯಿ ಅವರು ನಿನ್ನೆಯೇ ಹೇಳಿದ್ದಾರೆ. ಕಂಬಳಿ ಹಾಕುವವರಿಗೆ ಯೋಗ್ಯತೆ ಇರಬೇಕು ಅಂದ್ರೆ ಪರಿಶ್ರಮ ಇರಬೇಕು ಅಂತ ಅರ್ಥ ಎಂದರು.
ಇದನ್ನೂ ಓದಿ: ದೇಶದಲ್ಲಿ ಕಾಂಗ್ರೆಸ್ ಅಡ್ರೆಸ್ಗೆ ಇಲ್ಲ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ರೇಣುಕಾಚಾರ್ಯ ವಾಗ್ದಾಳಿ