ETV Bharat / state

ಸಿದ್ದೇಶ್ವರ ಶ್ರೀಗಳ ಜ್ಞಾನ ಯೋಗಾಶ್ರಮಕ್ಕೆ ಸಚಿವ ಬಿ.ಸಿ.ನಾಗೇಶ್ ಭೇಟಿ - Minister BC Nagesh meets Sri Siddeshwar Swamiji

ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದ ಕುರಿತು ಊಹಾಪೋಹದ ಸುದ್ದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಜ್ಞಾನ ಯೋಗಾಶ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ವಿವಿಧ ಮಠಾಧೀಶರು, ಭಕ್ತರು ಆಗಮಿಸಿದ್ದಾರೆ.

Abbot, devotees visit to Jnana Yogasram
ಸಚಿವ ಬಿಸಿ ನಾಗೇಶ್ ಸೇರಿದಂತೆ ಮಠಾಧೀಶರು, ಭಕ್ತರ ಭೇಟಿ
author img

By

Published : Dec 28, 2022, 7:53 PM IST

Updated : Dec 28, 2022, 8:01 PM IST

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ

ವಿಜಯಪುರ: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದ ಕುರಿತ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಜ್ಞಾನ ಯೋಗಾಶ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು. ವಿಜಯಪುರ ನಗರದಲ್ಲಿರುವ ಯೋಗಾಶ್ರಮದ ಆವರಣದಲ್ಲಿ ಭಕ್ತರಿಗೆ ದರ್ಶನ ನೀಡಿದ ಬಳಿಕ ವಿಶ್ರಾಂತಿಗೆ ತೆರಳಿರುವ ಶ್ರೀಗಳನ್ನು ಸಚಿವರು ಹಾಗೂ ಇತರೆ ಮುಖಂಡರು ಭೇಟಿಯಾದರು.

ಸಚಿವ ನಾಗೇಶ್ ಮಾತನಾಡಿ, ನೈತಿಕ ಶಿಕ್ಷಣ ವಿಷಯದ ಕುರಿತು ಸ್ವಾಮೀಜಿಗಳ ಗಮನಕ್ಕೆ ತಂದಿದ್ದೇನೆ. ಮುಂಬರುವ ದಿನಗಳಲ್ಲಿ ಒಂದು ಸೆಮಿನಾರ್ ಆಯೋಜನೆ ಮಾಡಲಾಗುತ್ತದೆ. ನೈತಿಕ ಶಿಕ್ಷಣ ಕುರಿತು ಅವರು ಸಹಮತ ಸೂಚಿಸಿದ್ದಾರೆ. ಅವರ ಆರೋಗ್ಯ ಕುರಿತ ಊಹಾಪೋಹಗಳು ಬೇಡ. ಸ್ವಾಮೀಜಿ ಆರೋಗ್ಯವಾಗಿದ್ದಾರೆ ಎಂದರು.

ಜ್ಞಾನ ಯೋಗಾಶ್ರಮದಲ್ಲಿ ಮಠಾಧೀಶರು, ಭಕ್ತರು

ಶ್ರೀಗಳ ಆರೋಗ್ಯ ವಿಚಾರವಾಗಿ ಹರಡಿರುವ ಸುದ್ದಿಯ ಕಾರಣಕ್ಕೆ ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದ್ದರು. ಭಕ್ತರು ಶ್ರೀಗಳ ದರ್ಶನಕ್ಕಾಗಿ ಕಾದು ಕುಳಿತಿದ್ದರು. ವಿವಿಧ ಮಠಾಧೀಶರು ಯೋಗಾಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಶ್ರೀ

Last Updated : Dec 28, 2022, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.