ವಿಜಯಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಹಾಲು ಕೊಡುತ್ತಿರುವ ಬೇವಿನ ಮರವೊಂದು ಜಿಲ್ಲೆಯಲ್ಲಿ ಕಂಡುಬಂದಿದೆ.
ವಿಜಯಪುರ ಜಿಲ್ಲೆಯ ಕನ್ನೂರ ಹಾಗೂ ಶಿರನಾಳ ಗ್ರಾಮಗಳ ಮಧ್ಯೆ ಇರುವ ರಾಮಜ್ಯೋತಿ ಸ್ಥಳದ ಹತ್ತಿರದ ಬೇವಿನ ಮರದಲ್ಲಿ ಹಾಲಿನ ನೊರೆ ಬರುತ್ತಿದೆ. ಈ ಬೇವಿನ ಮರವು ಕಳೆದ ಮೂರ್ನಾಲ್ಕು ದಿನಗಳಿಂದ ಹಾಲನ್ನು ನೀಡುತ್ತಿದ್ದು, ಅದನ್ನು ನೋಡಿ ಸಾರ್ವಜನಿಕರು ಅಚ್ಚರಿ ಪಟ್ಟಿದ್ದಾರೆ. ಇನ್ನು ಕೆಲವರು ಇದು ದೈವಶಕ್ತಿಯ ಪವಾಡ ಎಂದು ಮರಕ್ಕೆ ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆ. ಬೇವಿನ ಮರದಲ್ಲಿ ಈ ರೀತಿ ಸಿಹಿಯಾದ ಹಾಲಿನ ನೊರೆ ಬಂದ್ರೆ ಅದು ಆ ಭಾಗದಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಆದರೆ ಇದಕ್ಕೆ ವೈಜ್ಞಾನಿಕ ಕಾರಣವನೇ ಬೇರೆ ಇದೆ. ಮಳೆಗಾಲದ ಸಮಯದಲ್ಲಿ ಕೆಲವೊಂದು ಬೇವಿನ ಮರಗಳು ತನಗೆ ಬೇಡವಾದ ಅಂಶವನ್ನು ಈ ರೀತಿ ಹೊರಹಾಕುತ್ತವೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ನಮ್ಮ ಜನರು ಮಾತ್ರ ಅಪರೂಪದ ಘಟನೆಗಳು ಕಂಡು ಬಂದಾಗ ಪೂಜೆ ಸಲ್ಲಿಸಿ ಭಕ್ತಿ ಮೆರೆಯುವುದು ಸಹಜವಾಗಿದೆ.