ETV Bharat / state

ರೇಷನ್ ಕಾರ್ಡ್ ವಂಚಿತ ಕುಟುಂಬಗಳಿಗೆ ಮಾಜಿ ಸಚಿವರಿಂದ ಉಚಿತ ಪಡಿತರ

author img

By

Published : Apr 25, 2020, 6:09 PM IST

ಕ್ಷೇತ್ರದ ಒಟ್ಟು 3 ಸಾವಿರ ಕುಟುಂಬಗಳ ಪಟ್ಟಿಯನ್ನು ತಾಲೂಕು ಆಡಳಿತದ ಮೂಲಕ ಪಡೆಯಲಾಗಿದ್ದು, ಅವರೆಲ್ಲರಿಗೂ ಈಗ ಎಂ.ಬಿ.ಪಾಟೀಲ್​ ವೈಯಕ್ತಿಕವಾಗಿ ಪಡಿತರವನ್ನು ನೀಡಿದ್ದಾರೆ.

MB Patil
ರೇಷನ್ ಕಾರ್ಡ್ ವಂಚಿತ ಕಡು-ಬಡವ ಕುಟುಂಬಗಳಿಗೆ ಉಚಿತ ಪಡಿತರ ವಿತರಿಸಿದ ಶಾಸಕ ಎಂ.ಬಿ.ಪಾಟೀಲ

ವಿಜಯಪುರ: ತಮ್ಮ ವಿಧಾನಸಭಾ ಕ್ಷೇತ್ರದ ರೇಷನ್ ಕಾರ್ಡ್ ವಂಚಿತ ಕಡು-ಬಡವ ಕುಟುಂಬಗಳಿಗೆ ಉಚಿತ ಪಡಿತರವನ್ನು ವೈಯಕ್ತಿಕವಾಗಿ ನೀಡುವ ಮೂಲಕ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಕೊರೊನಾ ಸಂಕಷ್ಟದಲ್ಲಿ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಈ ಹಿಂದೆ ತಮ್ಮ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಸಭೆ ನಡೆಸಿದ ಶಾಸಕರು. ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸರ್ಕಾರಿ ಪಡಿತರ ವ್ಯವಸ್ಥೆಯಿಂದ ವಂಚಿತರಾಗಿದ್ದ ಕಡು-ಬಡವ ಕುಟುಂಬಗಳ ಪಟ್ಟಿ ಪಡೆದು ಅದನ್ನು ಕ್ರೋಢಿಕರಿಸಿ, ಆ ಎಲ್ಲ ಕುಟುಂಬಗಳಿಗೆ ತಲಾ ಉತ್ತಮ ಗುಣಮಟ್ಟದ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಗೋಧಿ ಹಿಟ್ಟು ಪ್ಯಾಕೆಟ್ ನೀಡುತ್ತಿದ್ದು, ಇಂದು ಮೂರು ಲಾರಿಗಳಲ್ಲಿ ಬಬಲೇಶ್ವರ, ತಿಕೋಟ ಮತ್ತು ಮಮದಾಪುರ ಹೋಬಳಿಗಳಿಗೆ ತಹಶೀಲ್ದಾರ್ ಮೂಲಕ ಕಳುಹಿಸಿ ಕೊಡಲಾಯಿತು.

ಬಬಲೇಶ್ವರ ಹಾಗೂ ತಿಕೋಟಾ ತಹಶೀಲ್ದಾರ್​ರವರು ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ವಂಚಿತ ಕುಟುಂಬಗಳ ಮನೆ-ಮನೆಗೆ ತಲುಪಿಸುತ್ತಿದ್ದಾರೆ. ಕ್ಷೇತ್ರದ ಒಟ್ಟು 3 ಸಾವಿರ ಕುಟುಂಬಗಳ ಪಟ್ಟಿಯನ್ನು ತಾಲೂಕು ಆಡಳಿತದ ಮೂಲಕ ಪಡೆಯಲಾಗಿದ್ದು, ಅವರೆಲ್ಲರಿಗೂ ಈಗ ಎಂ.ಬಿ.ಪಾಟೀಲ್​ ವೈಯಕ್ತಿಕವಾಗಿ ಪಡಿತರವನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.