ಹುಬ್ಬಳ್ಳಿ/ವಿಜಯಪುರ: ಹು-ಧಾ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆ ಮಾಡುವ ಪೂರ್ವದಲ್ಲಿಯೇ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಬಿಡುಗಡೆಗೊಳಿಸಿದೆ.
ಹೌದು, ರಾಜ್ಯದ 10 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿದ್ದು, ಬಳ್ಳಾರಿ – ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದರೆ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿದೆ.
ಬೆಳಗಾವಿ- ಮೇಯರ್ ಸಾಮಾನ್ಯ, ಉಪ ಮೇಯರ್ ಸಾಮಾನ್ಯ ಮಹಿಳೆ. ದಾವಣಗೆರೆ – ಮೇಯರ್ ಎಸ್ಸಿ ಮಹಿಳೆ, ಉಪ ಮೇಯರ್ ಸಾಮಾನ್ಯ ಮಹಿಳೆ. ಹುಬ್ಬಳ್ಳಿ-ಧಾರವಾಡ – ಮೇಯರ್ ಬಿಸಿಎ, ಉಪ ಮೇಯರ್ ಎಸ್ಸಿ ಮಹಿಳೆ. ಕಲಬುರ್ಗಿ-ಮೇಯರ್ ಸಾಮಾನ್ಯ ಮಹಿಳೆ, ಉಪ ಮೇಯರ್ ಬಿಸಿಬಿ. ಮಂಗಳೂರು–ಮೇಯರ್ ಸ್ಥಾನ ಸಾಮಾನ್ಯ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿಡಲಾಗಿದೆ. ಶಿವಮೊಗ್ಗ–ಮೇಯರ್ ಸ್ಥಾನ BCAW, ಉಪ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ತುಮಕೂರು- ಮೇಯರ್ ಎಸ್.ಟಿ, ಉಪ ಮೇಯರ್ ಸಾಮಾನ್ಯ ಮಹಿಳೆ. ವಿಜಯಪುರ – ಮೇಯರ್ ಸ್ಥಾನ ಎಸ್ಸಿ, ಉಪ ಮೇಯರ್ BCA ಮೈಸೂರು –ಮೇಯರ್ ಸ್ಥಾನ ಸಾಮಾನ್ಯ ಮಹಿಳೆ, ಉಪ ಮೇಯರ್ ಸಾಮಾನ್ಯ ಹೀಗೆ ರಾಜ್ಯದ ಹತ್ತು ಮಹಾನಗರ ಪಾಲಿಕೆಯ ಮೀಸಲಾತಿ ಘೋಷಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಇನ್ನೂ ಹಲವು ಪಾಲಿಕೆಗೆ ಚುನಾವಣೆ ನಡೆಯಬೇಕಾಗಿದೆ. ಚುನಾವಣೆ ಮುನ್ನವೇ ಮೇಯರ್ ಉಪಮೇಯರ್ ಮೀಸಲಾತಿ ಘೋಷಣೆ ಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯದೆ ಸೊರಗಿ ಹೋಗಿದ್ದ ಪಾಲಿಕೆಗೆ ಈ ಬಾರಿ ತಡವಾದರೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎಸ್.ಸಿ) ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾತಿ ನಿಗದಿ ಪಡಿಸಿ ರಾಜ್ಯಪತ್ರ ಹೊರಡಿಸಿದೆ. ಕಳೆದ ಬಾರಿ ಮಹಾನಗರ ಪಾಲಿಕೆ ಚುನಾವಣೆ ನಂತರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ವೇಳೆ ಅಧ್ಯಕ್ಷ ಸ್ಥಾನ 3ಬಿಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿತ್ತು.
ಸದ್ಯ ಚುನಾವಣೆಗೆ ತಡೆ: ವಾರ್ಡ್ ವಿಂಗಡಣೆ ವಿಚಾರವಾಗಿ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಡೆಯಾಜ್ಞೆ ತೆರವಾದ ಮೇಲೆ ಚುನಾವಣೆ ನಡೆಯಲಿದೆ. ನಂತರವೇ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿಗೆ ಮಹತ್ವ ಬರಲಿದೆ.