ETV Bharat / state

ಹನುಮ ದೇವರಿಗೂ ಮಾಸ್ಕ್: ವಿಶೇಷ ಆಚರಣೆಯೊಂದಿಗೆ ಕೊರೊನಾ ಜಾಗೃತಿ

ಹನುಮ ಜಯಂತಿಯನ್ನು ನಗರದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಈ ವರ್ಷ ದೇವಸ್ಥಾನ ಬಂದ್ ಮಾಡಿದ ಕಾರಣ ದೇವಸ್ಥಾನದತ್ತ ಭಕ್ತರು ಸುಳಿಯುತ್ತಿಲ್ಲ.

Mask for Hanuman
ಹನುಮ ದೇವರಿಗೂ ಮಾಸ್ಕ್.
author img

By

Published : Apr 8, 2020, 6:33 PM IST

ವಿಜಯಪುರ: ಕೊರೊನಾ ಭೀತಿಯಿಂದ ಎಲ್ಲ ಜಾತ್ರೆ, ಸಭೆ, ಸಮಾರಂಭ, ದೇವಸ್ಥಾನ ಪ್ರವೇಶವನ್ನು ರಾಜ್ಯಾದ್ಯಂತ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹನುಮ ಜಯಂತಿಯನ್ನು ನಗರದ ಶಿಕಾರಖಾನೆ ಬಡಾವಣೆಯಲ್ಲಿರುವ ಹನುಮಾನ್​ ಮಂದಿರದಲ್ಲಿ ಅರ್ಚಕರೊಬ್ಬರು ಆಂಜನೇಯ ಮೂರ್ತಿಗೆ ಮಾಸ್ಕ್ ಹಾಕುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ.

ಹನುಮ ಜಯಂತಿಯನ್ನು ನಗರದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ, ಈ ವರ್ಷ ದೇವಸ್ಥಾನ ಬಂದ್ ಮಾಡಿದ ಕಾರಣ ದೇವಸ್ಥಾನದತ್ತ ಭಕ್ತರು ಸುಳಿಯುತ್ತಿಲ್ಲ.

ನಗರದ ಮನಗೂಳಿ ಅಗಸಿಯ ಆಂಜನೇಯ ದೇವಸ್ಥಾನ ಪ್ರತಿ ಶನಿವಾರ, ಅಮವಾಸ್ಯೆ, ಹನುಮ ಜಯಂತಿ ದಿನ ಜನಜಂಗುಳಿ ಸೇರುತ್ತಿತ್ತು. ಆದರೆ ಈ ವರ್ಷ ದೇವಸ್ಥಾನ ಬಿಕೋ ಎನ್ನುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.