ವಿಜಯಪುರ: ಕೋವಿಡ್ ಎರಡನೇ ಅಲೆ ಭೀತಿ ನಡುವೆ ಮಾದರಿ ಮದುವೆಯೊಂದು ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.
ಅಂಬಿಕಾ ಹಾಗೂ ಪ್ರಶಾಂತ ನವದಂಪತಿ ಕೊರೊನಾ ನಿಯಮ ಪಾಲನೆ ಮಾಡಿ, ಮಾಸ್ಕ್ ಬದಲಾಯಿಸಿಕೊಳ್ಳುವುದರ ಮೂಲಕ ಸಪ್ತಪದಿ ತುಳಿದಿದ್ದಾರೆ.
ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಅಂಟಿಕೊಂಡಿರುವ ನಿಡಗುಂದಿ ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನು ವಧು ವರ ಸೇರಿದಂತೆ ಅವರ ಬಂಧು ಬಳಗ, ಸ್ನೇಹಿತರು, ಪಟ್ಟಣದ ಗುರು ಹಿರಿಯರು ಚಾಚು ತಪ್ಪದೇ ಪಾಲಿಸುವ ಮೂಲಕ ಇತರರಿಗೆ ಮಾದರಿಯಾದರು.
ಇದನ್ನೂ ಓದಿ: ಶಿರೂರು ಮಠದ 32ನೇ ಪೀಠಾಧಿಪತಿಯಾಗಿ ಶ್ರೀ ವೇದವರ್ಧನ ತೀರ್ಥರಿಗೆ ಪಟ್ಟಾಭಿಷೇಕ
ಇವರ ಆದರ್ಶ ವಿವಾಹ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಕಟ್ಟುಪಾಡು ಮೀರಿ ಕಾರ್ಯಕ್ರಮ ನಡೆಸುವವರಿಗೆ ಈ ವಿವಾಹ ಕಾರ್ಯಕ್ರಮ ಮಾದರಿಯಾಯಿತು.