ತಾಳಿಕೋಟೆ (ವಿಜಯಪುರ): ಸತತ ಮಳೆ ಹಿನ್ನೆಲೆಯಲ್ಲಿ ಡೋಣಿ ನದಿ ತುಂಬಿ ಹರಿಯುತ್ತಿದ್ದು, ಮದ್ಯದ ನಶೆಯಲ್ಲಿ ನದಿ ದಾಟಲು ಯತ್ನಿಸಿದ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಇಬ್ರಾಹಿಂ ಬೇಪಾರಿ (55) ಎಂಬಾತನೆ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ ಎಂದು ತಿಳಿದು ಬಂದಿದೆ. ತಾಳಿಕೋಟೆಯ ಹಡಗಿನಾಳ ಗ್ರಾಮದ ಬಳಿ ಘಟನೆ ನಡೆದಿದೆ.
ಈ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಮೈದುಂಬಿ ಹರಿಯುತ್ತಿದೆ. ಮದ್ಯ ಸೇವಿಸಿದ್ದ ಇಬ್ರಾಹಿಂ ನದಿ ದಾಟುವ ದುಸ್ಸಾಹಸಕ್ಕೆ ಯತ್ನಿಸಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ: 66ರ ಹರೆಯದ ವೃದ್ಧೆ ಕೈ ಹಿಡಿದ 77ರ ವೃದ್ಧ.. ಮಗನೇ ಮುಂದೆ ನಿಂತು ಮಾಡಿದರು ಕಲ್ಯಾಣ!