ETV Bharat / state

ಸಾಲ ವಾಪಸ್ ನೀಡುವಂತೆ ವೃದ್ಧೆಗೆ ಬಂದೂಕು ತೋರಿಸಿ ಬೆದರಿಕೆ - A Man threaten old age to pay off debt

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಸಾಲದ ಹಣ ವಾಪಸ್ ನೀಡುವಂತೆ ವ್ಯಕ್ತಿಯೊಬ್ಬ ವೃದ್ಧೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ.

A Man threaten old age to pay off debt
ಸಾಲ ವಾಪಸ್ ನೀಡುವಂತೆ ವೃದ್ಧೆ ಮೇಲೆ ಹಲ್ಲೆ
author img

By

Published : Jan 16, 2022, 12:11 PM IST

ವಿಜಯಪುರ: ಸಾಲ ವಾಪಸ್ ನೀಡಿಲ್ಲವೆಂದು ವ್ಯಕ್ತಿಯೊಬ್ಬ ವೃದ್ಧೆಗೆ ಬಂದೂಕು ತೋರಿಸಿ ಬೆದರಿಕೆ ಹಾಕಿ, ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.

ಶಾಂತಾಬಾಯಿ ರಾಠೋಡ (65) ಅವರಿಗೆ ಗ್ರಾಮದ ಮಾದಣ್ಣ ಲಾಲಿ ಎಂಬ ವ್ಯಕ್ತಿ ಬಂದೂಕು ತೋರಿಸಿದ್ದಲ್ಲದೆ, ಆಕೆಯ ಜೊತೆ ಅನುಚಿತವಾಗಿ ವರ್ತನೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಾಲ ವಾಪಸ್ ನೀಡುವಂತೆ ವೃದ್ಧೆ ಮೇಲೆ ಹಲ್ಲೆ

ಮಾದಣ್ಣನಿಂದ ಶಾಂತಾಬಾಯಿ ಕೈಗಡವಾಗಿ 30 ಸಾವಿರ ರೂ. ಸಾಲ ಪಡೆದಿದ್ದಳು ಎನ್ನಲಾಗಿದೆ. ಹಣ ನೀಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮಾದಣ್ಣ, ಶಾಂತಾಬಾಯಿ ಬಳಿ ಹೋಗಿ ಹಣ ವಾಪಸ್ ನೀಡುವಂತೆ ಕೇಳಿದ್ದಾನೆ. ಸ್ವಲ್ಪ ಕಾಲಾವಕಾಶ ನೀಡು ಎಂದು ವೃದ್ಧೆ ಕೇಳಿದ್ದಕ್ಕೆ ಆಕೆಯ ಜತೆ ಅನುಚಿತವಾಗಿ ವರ್ತಿಸಿ, ತನ್ನ ಬಳಿ ಇದ್ದ ಬಂದೂಕನ್ನು ತೋರಿಸಿ ಬೆದರಿಸಿದ್ದಾನೆ ಎನ್ನಲಾಗಿದೆ.

ಸದ್ಯಕ್ಕೆ ವೃದ್ಧೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವ ಬೆದರಿಕೆ ಇರುವ ಕಾರಣ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.