ETV Bharat / state

ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಿದ್ದ ಪತ್ನಿ ಕೊಂದ ಪತಿ..! - wife murder

ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಿದ್ದ ಪತ್ನಿಯನ್ನು ಪತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಿದ್ದ ಪತ್ನಿ ಕೊಂದ ಪತಿ
author img

By

Published : Jun 8, 2019, 3:19 PM IST

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ಕಂದಾಯ ನಿರೀಕ್ಷಕರ ಕಚೇರಿ ಎದುರು ನಡೆದಿದೆ.

ಶಾಹಿದಾ ಬಾಗವಾನ್​ (26) ಕೊಲೆಯಾದ ಮಹಿಳೆ. ಈಕೆಯ ಪತಿ ಖಾಜಿಸಾಬ್ ಬಾಗವಾನ್​ ಕೊಲೆ ಮಾಡಿದ ಆರೋಪಿ. ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದ ವೇಳೆ ಪತಿ ಖಾಜಿಸಾಬ್ ಪತ್ನಿ ಶಾಹಿದಾಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ರಂಜಾನ್ ಹಬ್ಬದ ಹಿನ್ನೆಲೆ ಎರಡು ವರ್ಷದ ಮಗುವಿನೊಂದಿಗೆ ಶಾಹಿದಾ ತವರು ಮನೆಯಾದ ಹಿರೇಬೇವನೂರು ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಖಾಜಿಸಾಬ್ ತನ್ನ ಎರಡು ವರ್ಷದ ಮಗುವನ್ನು ವಾಪಸ್ ಪಡನೂರು ಗ್ರಾಮಕ್ಕೆ ಕರೆದುಕೊಂಡು ಬಂದಿದ್ದನು. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು.

ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಪತಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ಬೈಕ್​ ಮೇಲೆ ಬಂದ ಖಾಜಿಸಾಬ್, ಮಾರಕಾಸ್ತ್ರಗಳಿಂದ ಶಾಹಿದಾಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಇಂಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:ವಿಜಯಪುರ Body:ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಪತ್ನಿಯನ್ನು ಪತಿಯೇ ಬರ್ಬರ್ ವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ
ಇಂಡಿ ಪಟ್ಟಣದ ಕಂದಾಯ ನಿರೀಕ್ಷಕರ ಕಚೇರಿ ಎದುರು ನಡೆದಿದೆ.
ಶಾಹಿದಾ ಬಾಗವಾನ (26) ಕೊಲೆಯಾದ ಮಹಿಳೆ. ಈಕೆಯ ಪತಿ ಖಾಜಿಸಾಬ್ ಬಾಗವಾನ ಕೊಲೆ ಮಾಡಿದ ಆರೋಪಿ.
ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದ ವೇಳೆ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಲಾಗಿದೆ.
26 ವರ್ಷದ ಶಾಹಿದಾ ಬಾಗವಾನ್ ಕೊಲೆಯಾದ ಮಹಿಳೆ.
ಪತಿ ಖಾಜಿಸಾಬ್ ಬಾಗವಾನ್ (30) ನಿಂದ ಕೃತ್ಯ. ದಂಪತಿ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ವಾಸವಿದ್ದರು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಶಾಹಿದಾ ತವರು ಮನೆ ಹಿರೇಬೇವನೂರ ಗ್ರಾಮಕ್ಕೆ ತೆರಳಿದ್ದರು.ಈ ವೇಳೆ ಪತಿ ಖಾಜಿಸಾಬ್ ತನ್ನ ಎರಡು ವರ್ಷದ ಮಗುವನ್ನು ವಾಪಸ್ ಪಡನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದನು.ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು.
ಈ ವಿಚಾರವಾಗಿ ಬೆಳಗ್ಗೆ ಪತಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ
ಬೈಕ್ ಮೇಲೆ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಹಾಡು ಹಗಲೆ ನಡೆದ ಕೃತ್ಯದಿಂದ ಬೆಚ್ಚಿ ಬಿದ್ದ ಜನ.
ಸ್ಥಳಕ್ಕೆ ಇಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.