ETV Bharat / state

ವಿಜಯಪುರ: ವಿಜಯೋತ್ಸವದಲ್ಲಿ ತಲ್ವಾರ್​​ ಪ್ರದರ್ಶಿಸಿದ್ದ ವ್ಯಕ್ತಿ ಬಂಧನ - bijapura news

ತಲ್ವಾರ್​ ಕೈಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಸಂಭ್ರಮಾಚರಣೆ ಮಾಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

man-arrested-for-celebrating-candidates-victory-with-talwar
ವಿಜಯಪುರ: ವಿಜಯೋತ್ಸವದಲ್ಲಿ ತಲ್ವಾರ್​​ ಪ್ರದರ್ಶಿಸಿದ್ದ ವ್ಯಕ್ತಿ ಬಂಧನ
author img

By

Published : May 14, 2023, 11:02 PM IST

ವಿಜಯಪುರ: ವಿಜಯೋತ್ಸವದಲ್ಲಿ ತಲ್ವಾರ್​​ ಪ್ರದರ್ಶಿಸಿದ್ದ ಆರೋಪಿ ಬಂಧನ

ವಿಜಯಪುರ: ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್​​ ಗೆಲುವು ಸಾಧಿಸುತ್ತಿದ್ದಂತೆಯೇ‌ ನಗರದಲ್ಲಿ ಸಂಚರಿಸಿ ತಲ್ವಾರ್​​​​ ಪ್ರದರ್ಶನ ಮಾಡಿದ ಆರೋಪದಡಿ ಯುವಕನನ್ನು ಭಾನುವಾರ ರಾತ್ರಿ ವಿಜಯಪುರ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ನಗರ ನಿವಾಸಿ ರಾಜಕುಮಾರ ಹಳ್ಳದಮನಿ (28) ಬಂಧಿತ ಆರೋಪಿ.

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ್​ ಚುನಾವಣೆಯಲ್ಲಿ ಜಯ ಗಳಿಸುತ್ತಿದ್ದಂತೆ ಅವರ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಲು ಶ್ರೀ ಸಿದ್ದೇಶ್ವರ ದೇವಸ್ಥಾನ ಬಳಿ ಜಮಾಯಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಬಳಿಕ ರ್ಯಾಲಿ ನಡೆಸಿದರು. ಯತ್ನಾಳ್​ ಅಭಿಮಾನಿ ಎನ್ನಲಾದ ರಾಜಕುಮಾರ ತಲ್ವಾರ್​ ಕೈಯಲ್ಲಿ ಹಿಡಿದುಕೊಂಡು ರಸ್ತೆ ಮೇಲೆ ಸುತ್ತುತ್ತ ಸಂಭ್ರಮಾಚರಣೆ ಮಾಡಿರುವುದು ವೈರಲ್​ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುವ ಮೂಲಕ ಸದ್ದು ಮಾಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಾಂಧಿ ಚೌಕ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಹಿಂದಿದೆ ಪ್ರಶಾಂತ್​ ಕಿಶೋರ್​ ತಂಡದಲ್ಲಿದ್ದ ಚಾಣಾಕ್ಷನ ಪ್ಲಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.