ETV Bharat / state

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಕಳ್ಳತನಕ್ಕೆ ಯತ್ನ: ಮಹಿಳೆ ಪೊಲೀಸರ​ ವಶಕ್ಕೆ - Vijayapur District Hospital

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಆರೋಪಿ ಮಹಿಳೆಯನ್ನು ವಿಚಾರಣೆಗೆಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಜಯಪುರ ಜಿಲ್ಲಾಸ್ಪತ್ರೆ
ವಿಜಯಪುರ ಜಿಲ್ಲಾಸ್ಪತ್ರೆ
author img

By

Published : Jun 25, 2022, 10:23 AM IST

ವಿಜಯಪುರ: ಮಹಿಳೆಯೊಬ್ಬರು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ವಿಜಯಪುರದ ಬ್ಯಾಕೋಡ ನಿವಾಸಿ ಸತ್ಯವ್ವ ರಮೇಶ ಹೆಬ್ಬಾಳ ಎಂಬ ಮಹಿಳೆ ಮುದ್ದೇಬಿಹಾಳದ ಬಸವರಾಜ್ ಮೇಟಿ ಎಂಬುವರ ಮಗು ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಬಸವರಾಜ ಮೇಟಿ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ನಿನ್ನೆ ಸಂಜೆ 4ರ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಈ ವೇಳೆ ತಾಯಿ ಮತ್ತು ಮಗುವಿನ ಪಕ್ಕದಲ್ಲಿದ್ದ ಮಹಿಳೆ ತನಗೆ ವೈದ್ಯರ ಪರಿಚಯವಿದ್ದು ಮಗುವನ್ನು ತೋರಿಸಿಕೊಂಡು ಬರುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಅದೇನಾಗಿದೆಯೋ ಮಗುವನ್ನು ವಾಪಸ್ ತೆಗೆದುಕೊಂಡು ಬಂದಿದ್ದಾರೆ. ಇದರಿಂದ ಸಂಶಯಗೊಂಡ ಆಸ್ಪತ್ರೆ ಸಿಬ್ಬಂದಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಅಂತಿಮವಾಗಿ ರಾಜಕೀಯ ಮಹಾ ಆಟ ಶುರು: 16 ಶಾಸಕರ ಅನರ್ಹತೆಗೆ ಉಪಸಭಾಧ್ಯಕ್ಷರಿಂದ ನೋಟಿಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.