ETV Bharat / state

ದೇವರ ದಯೆಯಿಂದ ಬದುಕುಳಿದಿರುವೆ, ಧರ್ಮರಾಜ್​ ಕೊಲೆಯಲ್ಲಿ ನನ್ನ ಕೈವಾಡವಿಲ್ಲ; ಸಾಹುಕಾರ ಭೈರಗೊಂಡ

ಭೀಮಾತೀರದ ನಟೋರಿಯಸ್ ಧರ್ಮರಾಜ್ ಚಡಚಣ ನಕಲಿ ಎನ್‍ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಸಾವು, ಭೀಮಾತೀರದಲ್ಲಿ ಮತ್ತೊಮ್ಮೆ ರಕ್ತ ಹರಿಯುವಂತೆ ಮಾಡಿತ್ತು. ಈ ಕೊಲೆಗಳಿಗೆ ನೇರವಾಗಿ ಮಹಾದೇವ ಸಾಹುಕಾರ ಭೈರಗೊಂಡ ಕಾರಣವೆಂದು ಕಳೆದ ನವೆಂಬರ್ 2ರಂದು ಕನ್ನೊಳ್ಳಿ ಕ್ರಾಸ್ ಬಳಿ ಸಾಹುಕಾರ ಚಡಚಣಕ್ಕೆ ಹೋಗುತ್ತಿದ್ದಾಗ ಏಕಾಏಕಿ 15-20 ಜನ ಗುಂಡಿನ ದಾಳಿ ನಡೆಸಿದ್ದರು...

mahadeva-sahukara-byaragonda-talk-about-shoot-out
ಮಹಾದೇವ ಸಾಹುಕಾರ ಭೈರಗೊಂಡ
author img

By

Published : Mar 3, 2021, 9:27 PM IST

ವಿಜಯಪುರ: ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಸಹಚರರ ಮೇಲೆ ಗುಂಡಿನ ದಾಳಿ ನಡೆದು ಮಾ. 2ಕ್ಕೆ ಐದು ತಿಂಗಳು ಕಳೆದಿವೆ. ಈಗ ಸಾಹುಕಾರ ಭೈರಗೊಂಡ ಚೇತರಿಸಿಕೊಂಡು ವಾಪಸ್ ಉಮರಾಣಿಯ ತನ್ನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ತಾನು ಕಳೆದ ಐದು ತಿಂಗಳು ಜೀವನ್ಮರಣದ ಮಧ್ಯೆ ಯಾವ ರೀತಿ ಹೋರಾಟ ನಡೆಸಿದೆ ಎಂಬುದರ ಮಾಹಿತಿಯನ್ನು ಸವಿವರವಾಗಿ ಬಿಚ್ಚಿಟ್ಟಿದ್ದಾನೆ.

ಮಹಾದೇವ ಸಾಹುಕಾರ ಭೈರಗೊಂಡ ಮಾತನಾಡಿದರು

ಎರಡು ಕುಟುಂಬಗಳ ದ್ವೇಷದಿಂದ ಭೀಮಾತೀರ ಕಳೆದ ಮೂರು ದಶಕಗಳಿಂದ ರಕ್ತಸಿಕ್ತ ವಾತಾವರಣದಲ್ಲಿಯೇ ಕಳೆದು ಹೋಗಿದೆ. ಭೀಮೆಯ ತಿಳಿ ನೀರಿನಲ್ಲಿ ದ್ವೇಷದ ರಕ್ತ ಸೇರಿ ಭೀಮಾತೀರ ರಾಜ್ಯದಲ್ಲಿಯೇ ಕುಖ್ಯಾತಿ ಪಡೆದುಕೊಂಡಿದೆ. ಭೀಮಾತೀರದ ರಕ್ತಸಿಕ್ತ ಇತಿಹಾಸ ಹೇಗಿದೆ? ಮಹಾದೇವ ಸಾಹುಕಾರ ಭೈರಗೊಂಡನ ಮೇಲೆ ದಾಳಿ ನಡೆಸಿದವರು ಯಾರು ಎನ್ನುವ ಪೂರ್ಣ ಡೀಟೆಲ್ಸ್​ ಇಲ್ಲಿದೆ.

ಭೀಮಾತೀರದ ನಟೋರಿಯಸ್ ಧರ್ಮರಾಜ್ ಚಡಚಣ ನಕಲಿ ಎನ್‍ಕೌಂಟರ್ ಹಾಗೂ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಸಾವು, ಭೀಮಾತೀರದಲ್ಲಿ ಮತ್ತೊಮ್ಮೆ ರಕ್ತ ಹರಿಯುವಂತೆ ಮಾಡಿತ್ತು. ಈ ಕೊಲೆಗಳಿಗೆ ನೇರವಾಗಿ ಮಹಾದೇವ ಸಾಹುಕಾರ ಭೈರಗೊಂಡ ಕಾರಣವೆಂದು ಕಳೆದ ನವೆಂಬರ್ 2ರಂದು ಕನ್ನೊಳ್ಳಿ ಕ್ರಾಸ್ ಬಳಿ ಸಾಹುಕಾರ ಚಡಚಣಕ್ಕೆ ಹೋಗುತ್ತಿದ್ದಾಗ ಏಕಾಏಕಿ 15-20 ಜನ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್​ ಮಹಾದೇವ ಸಾಹುಕಾರ ಭೈರಗೊಂಡಗೆ ಎರಡು ಗುಂಡು ತಗುಲಿದರೂ ಬದುಕುಳಿದಿದ್ದ. ಈತನ ಗನ್ ಮ್ಯಾನ್ ಹಾಗೂ ಸಹಚರ ದಾಳಿಯಲ್ಲಿ ಸಾವನ್ನಪ್ಪಿದ್ದರು. ಅಂದು ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಾದೇವ ಸಾಹುಕಾರ ಭೈರಗೊಂಡ ವಿಜಯಪುರ ಹಾಗೂ ಹೈದರಾಬಾದ್ ಆಸ್ಪತ್ರೆಯಲ್ಲಿ ಐದು ತಿಂಗಳು ಚಿಕಿತ್ಸೆ ಪಡೆದುಕೊಂಡು ಸ್ವಗ್ರಾಮ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.

ಇದೀಗ ತನ್ನ ಅನುಭವವನ್ನು ಹಂಚಿಕೊಂಡಿರುವ ಅವರು, ತಾನು ಒಳ್ಳೆಯವನಾಗಿರುವ ಕಾರಣ ಬದುಕಿ ಉಳಿದಿದ್ದೇನೆ. ಆಗ ನನ್ನ ಸಹಾಯಕ್ಕೆ ಪೊಲೀಸರು ಬಂದಿದ್ರು, ಅಂದು ನನ್ನ ಬಳಿ ಬುಲೆಟ್ ಪ್ರೂಫ್​ ಜಾಕೆಟ್​ ಇದ್ದರೂ, ಸೆಕೆ ಇದ್ದ ಕಾರಣ ಅದನ್ನು ತೆಗೆದು ಕಾರಿನಲ್ಲಿಟ್ಟಿದ್ದೆ, ದೇವರು ನನ್ನ ಜತೆ ಇದ್ದರು. ಆ ಕಾರಣಕ್ಕೆ ನಾನು ಬದುಕುಳಿದು ಬಂದಿದ್ದೇನೆ ಎಂದರು.

ಕೆಲವರು ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಅಂದು ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಬದುಕುಳಿಯುವುದಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಕಾರು ಬಿಟ್ಟು ಕದಲಿಲ್ಲ. ಎರಡು ಗುಂಡು ತಗುಲಿದರೂ ದೇವರ ದಯೆಯಿಂದ ಬದುಕಿ ಉಳಿದಿದ್ದೇನೆ. ನಾನು ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣ ಕೊಲೆಯಲ್ಲಿ ಭಾಗಿಯಾಗಿಲ್ಲ. ಆದರೆ, ನನ್ನನ್ನು ಟಾರ್ಗೆಟ್ ಮಾಡಿ ಅವರ ತಂದೆ ಮಲ್ಲಿಕಾರ್ಜುನ ಚಡಚಣ ಹಾಗೂ ಅವರ ಪತ್ನಿ ವಿಮಲಾಬಾಯಿ ಈ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.

ನವೆಂಬರ್ 2ರಂದು ಕನ್ನಾಳ ಕ್ರಾಸ್ ಬಳಿ ನಡೆದ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣದಲ್ಲಿ ಒಟ್ಟು 40 ಜನ ಭಾಗಿಯಾಗಿದ್ದಾರೆ. ಅವರಲ್ಲಿ ಈಗಾಗಲೇ 36 ಜನರನ್ನು ಬಂಧಿಸಲಾಗಿದೆ. ಮಹಾದೇವ ಸಾಹುಕಾರ ಭೈರಗೊಂಡ ಕೊಲೆಗೆ ಧರ್ಮರಾಜ ಚಡಚಣ ತಂದೆ ಮಲ್ಲಿಕಾರ್ಜುನ ಚಡಚಣ ಹಾಗೂ ಅವರ ಕುಟುಂಬದವರು ಸುಪಾರಿ ನೀಡಿದ್ದಾರೆ. ಈ ಘಟನೆ ಹಿಂದೆ ಅವರೇ ಸೂತ್ರಧಾರರಾಗಿದ್ದಾರೆ. ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.

ಓದಿ: ಇದು ನಾಚಿಕೆಗೇಡಿನ, ಮಾನಗೆಟ್ಟ ಕೆಲಸ, ನಿನ್ನೆಯೇ ರಾಜೀನಾಮೆ ಕೊಡಬೇಕಿತ್ತು: ಸಿದ್ದರಾಮಯ್ಯ

ಸದ್ಯ ಮಹಾದೇವ ಸಾಹುಕಾರ ಭೈರಗೊಂಡ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿರಬಹುದು. ಈತನ ಕೊಲೆಗೆ ಸಂಚು ಮಾಡುತ್ತಿರುವ ಮಲ್ಲಿಕಾರ್ಜುನ ಚಡಚಣ ಹಾಗೂ ಅವರ ಕುಟುಂಬ ವರ್ಗ ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ. ಇನ್ನೂ ಸಾಹುಕಾರನಿಗೆ ನೆತ್ತಿಯ ಮೇಲೆ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಈ ಎರಡು ಕುಟುಂಬದ ದ್ವೇಷ ಇನ್ನೆಷ್ಟು ಜನರ ಬಲಿ ತೆಗೆದುಕೊಳ್ಳುತ್ತದೆ. ಇವರ ದ್ವೇಷಕ್ಕೆ ಮುಲಾಮು ಇಲ್ಲವೇ? ಎನ್ನುವ ಆತಂಕ ಭೀಮಾತೀರದ ಜನರಲ್ಲಿ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.