ETV Bharat / state

'ಆಪರೇಷನ್ ಕಮಲ' ಕರ್ನಾಟಕದಲ್ಲಿ ಮುಗಿದಿದ್ದು- ಈಗ ಮಹಾರಾಷ್ಟ್ರದ ಸರದಿ: ಎಂ.ಬಿ ಪಾಟೀಲ್​ - ಬಿಜೆಪಿ ಕುರಿತು ಎಂ ಬಿ ಪಾಟೀಲ್​ ಹೇಳಿಕೆ

'ಹೈಜಾಕ್' ಎನ್ನುವುದು ಕರ್ನಾಟಕದಲ್ಲಿ ಆಗಿ ಹೋಗಿದೆ. ಈಗ ಮಹಾರಾಷ್ಟ್ರದ ಸರದಿ. ಇದು ಬಹಳ ದಿನ ನಡೆಯಲ್ಲ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ ಪಾಟೀಲ್​ ಹೇಳಿದರು.

M B Patil
ಎಂ.ಬಿ ಪಾಟೀಲ್​
author img

By

Published : Jun 25, 2022, 7:33 PM IST

ವಿಜಯಪುರ: ಆಪರೇಷನ್ ಕಮಲ ಎಂಬುದು ಪ್ರಜಾಸತ್ತಾತ್ಮಕ ವಿರೋಧಿಯಾಗಿದ್ದು, ಶಾಸಕರಿಗೆ ಹಣ ಕೊಟ್ಟು ರಾಜೀನಾಮೆ ಕೊಡಿಸಿ ಮತ್ತೊಮ್ಮೆ ಬೇರೆ ಚುನಾವಣೆಗೆ ನಿಲ್ಲಿಸಿ ಅವರ ಸಹಾಯದಿಂದ ಸರ್ಕಾರ ರಚಿಸುವುದು ಬಿಜೆಪಿಯ ಕೆಲಸ. ಇದು ಕರ್ನಾಟಕದಲ್ಲಿ ಆಗಿ ಹೋಗಿದೆ. ಈಗ ಮಹಾರಾಷ್ಟ್ರದ ಸರದಿ. ಇದು ಬಹಳ ದಿನ ನಡೆಯಲ್ಲ. ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್​ ಹೇಳಿದರು.

ಸಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ತಾವು ಮಾಡಿದ್ದೆಲ್ಲ ನಡೆಯುತ್ತದೆ ಎಂದು ತಿಳಿದುಕೊಂಡಿದೆ. ಎಲ್ಲಾ ಸಮಯದಲ್ಲಿ ಇದು ನಡೆಯೋದಿಲ್ಲ. ಮಹಾರಾಷ್ಟ್ರದ ಬೆಳವಣಿಗೆಯನ್ನು ಖಂಡಿಸುತ್ತೇನೆ. ಚುನಾವಣೆಯಲ್ಲಿ ನೇರವಾಗಿ ಆಯ್ಕೆಯಾಗಿ ಸರ್ಕಾರ ರಚಿಸಲಿ. ಕರ್ನಾಟಕದಲ್ಲಿ‌ 17 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಕರೆದುಕೊಂಡು 40% ಕಮಿಷನ್ ಸರ್ಕಾರವನ್ನು ರಚನೆ ಮಾಡಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ

ಸಚಿವ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅಖಂಡ ಭಾರತ, ಅಖಂಡ ಕರ್ನಾಟಕ ನಮ್ಮ ಹಿರಿಯರ ತ್ಯಾಗ ಬಲಿದಾನದಿಂದ ಆಗಿರುವುದು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು. ಆದರೆ ಪ್ರತ್ಯೆಕ ರಾಜ್ಯ ಎನ್ನುವುದು ಸೂಕ್ತ ವಿಚಾರವಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಇಡಿ ವಿಚಾರಣೆಗೆ ಪ್ರತಿಕ್ರಿಯಿಸಿ, ತನಿಖಾ ಸಂಸ್ಥೆಗಳು ಬಿಜೆಪಿಯ ಅಂಗ ಸಂಸ್ಥೆಗಳಾಗಿವೆ. ಇವೆಲ್ಲಕ್ಕೂ ಜನರು ಇತಿಶ್ರೀ ಹಾಡುತ್ತಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ಶಾಶ್ವತ, ಯಾರೂ ಬರಲ್ಲ ಅಂದುಕೊಂಡಿದ್ದೆವು. ಇವತ್ತು ನಮಗೆ ಸಾಕಷ್ಟು ಹಿನ್ನಡೆಯಾಗಿದೆ. ಈಗ ಬಿಜೆಪಿ ವಿರುದ್ಧವೂ ಆ ಪ್ರಕ್ರಿಯೆ ಆರಂಭವಾಗಿದೆ ಎಂದು ಎಂ ಬಿ ಪಾಟೀಲ್ ಅಭಿಪ್ರಾಯಟ್ಟರು.

ಇದನ್ನೂ ದಿನ: ಅಂಜನಾದ್ರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಸೇರಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೆ ಸಿಎಂ ಸೂಚನೆ

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಇತಿಹಾಸ ತಿರುಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮೊದಲು ಮುಸ್ಲಿಂರನ್ನು ಮಾತ್ರ ಟಾರ್ಗೆಟ್ ಮಾಡಲಾಗಿತ್ತು. ನಂತರ ಬಸವಣ್ಣ, ನಾರಾಯಣಗುರು, ಕುವೆಂಪು, ಆದಿ ಚುಂಚನಗಿರಿ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ,‌ ಮಹಾತ್ಮ ಗಾಂಧಿಯವರನ್ನೂ ಬಿಡಲಿಲ್ಲ. ಇದು ಎಲ್ಲಿಯವರೆಗೆ ‌ನಡೆಯುತ್ತದೆ ನೋಡಬೇಕು. ಅಂತಿಮ ಸೀಲ್ ಎನ್ನುವುದನ್ನು ಜನರೇ ಹಾಕುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.