ETV Bharat / state

ಮುದ್ದೇಬಿಹಾಳ: ಎಣ್ಣೆ ಗುಂಗಿನಲ್ಲಿದ್ದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯಲ್ಲಿ ಪುರಸಭೆ ಮಳಿಗೆಗಳ ಹಿಂಭಾಗದಲ್ಲಿ ಇರುವ ತಾಲೂಕು ಪಂಚಾಯತ್​ ಮಳಿಗೆಗಳ ಮುಂದೆ ಎಣ್ಣೆ ಪಾರ್ಟಿ ಹಾಗೂ ಹರಟೆಯಲ್ಲಿ ತೊಡಗಿದ್ದವರಿಗೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಹಾಗೂ ಪೊಲೀಸರು ಲಾಠಿ ರುಚಿ ತೋರಿಸಿದರು.

police lathi Charge
ಮುದ್ದೇಬಿಹಾಳದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್
author img

By

Published : Jul 12, 2020, 1:57 PM IST

ಮುದ್ದೇಬಿಹಾಳ: 2ನೇ ವಾರದ ಸಂಡೇ ಲಾಕ್​​ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಮನೆಯಿಂದ ಹೊರ ಬರುವುದು ಬಿಟ್ಟಿಲ್ಲ. ಏತನ್ಮಧ್ಯೆ ಹೀಗೆ ಹೊರ ಬಂದು ಎಣ್ಣೆ ಗುಂಗಿನಲ್ಲಿ ಇರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಲಾಕ್​ಡೌನ್​ ನಿಯಮ ಉಲ್ಲಂಘನೆ: ಮುದ್ದೇಬಿಹಾಳದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್
ಪಟ್ಟಣದ ತಂಗಡಗಿ ರಸ್ತೆಯಲ್ಲಿ ಪುರಸಭೆ ಮಳಿಗೆಗಳ ಹಿಂಭಾಗದಲ್ಲಿ ಇರುವ ತಾಲೂಕು ಪಂಚಾಯತ್​ ಮಳಿಗೆಗಳ ಮುಂದೆ ಎಣ್ಣೆ ಪಾರ್ಟಿ ಹಾಗೂ ಹರಟೆಯಲ್ಲಿ ತೊಡಗಿದ್ದವರಿಗೆ ಪಿಎಸ್​ಐ ಮಲ್ಲಪ್ಪ ಮಡ್ಡಿ ಹಾಗೂ ಪೊಲೀಸರು ಲಾಠಿ ರುಚಿ ತೋರಿಸಿದರು. ಮನೆಯಿಂದ ಹೊರಗಡೆ ಬಂದು ಲಾಕ್​ಡೌನ್ ಉಲ್ಲಂಘನೆ ಮಾಡಿದ ಓರ್ವ ವ್ಯಕ್ತಿ ತಪ್ಪಿದ್ದರೆ ಹೊಡೆಯಿರಿ ಸರ್ ಎಂದು ಬೇಡಿಕೊಂಡ ಪ್ರಸಂಗವೂ ನಡೆಯಿತು. ಇದಲ್ಲದೆ ಬಸವೇಶ್ವರ ವೃತ್ತದಲ್ಲಿ ಮಾಸ್ಕ್​ ಧರಿಸದೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಕೆಲವರು ಬೈಕ್ ವಶಕ್ಕೆ ತೆಗೆದುಕೊಳ್ಳುತ್ತಲೇ ಪ್ರಭಾವ ಬಳಸಿ ಮಾತನಾಡಿಸಲು‌ ಮುಂದಾದರೂ ಕ್ಯಾರೆ ಎನ್ನದ ಪೊಲೀಸರು, ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದರು.

ದಂಡ ವಿಧಿಸಲು ಸೂಚಿಸಿದ್ದ ಶಾಸಕ ನಡಹಳ್ಳಿ: ತಾಳಿಕೋಟಿಯಲ್ಲಿ ಜು. 11ರಂದು ಸುದ್ದಿಗೋಷ್ಠಿ ನಡೆಸಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಲಾಕ್​ಡೌನ್ ಉಲ್ಲಂಘನೆ ಮಾಡುವವರಿಗೆ ಹಾಗೂ ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಸೂಚನೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.