ವಿಜಯಪುರ: ನಾಳೆಯಿಂದ ಬೆಂಗಳೂರು ಮಾದರಿಯಲ್ಲಿ ಒಂದು ವಾರದವರೆಗೂ ಲಾಕ್‌ಡೌನ್ ಜಾರಿಗೊಳ್ಳಲಿದೆ ಎಂಬ ಭೀತಿಯಿಂದ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ಸಾಮಾಗ್ರಿ ಖರೀದಿಯಲ್ಲಿ ತೊಡಗಿದ ಘಟನೆ ನಡೆದಿದೆ.
ನಗರದ ಸಿದ್ದೇಶ್ವರ ಮಂದಿರ ರಸ್ತೆ ಜನ ಸಂದಣಿಯಿಂದ ತುಂಬಿ ಹೋಗಿತ್ತು. ಎಲ್‌ಬಿಎಸ್ ಮಾರುಕಟ್ಟೆ ರಸ್ತೆಯಲ್ಲಿ ಮೂರು ಗಂಟೆಯಿಂದ ಜನರು ಕೊರೊನಾ ತಡೆಗೆ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳನ್ನೇ ಮರೆತು ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.
ಒಂದು ವಾರಗಳ ಕಾಲ ಲಾಕ್‌ಡೌನ್ ಮಾಡುವ ನಿರ್ಧಾರ ಜಿಲ್ಲಾಡಳಿತ ಕೈಗೊಂಡರೆ ಅಗತ್ಯ ಸಾಮಗ್ರಿಗಳ ಕೊಳ್ಳುವುದು ಕಷ್ಟವಾಗುತ್ತೆ ಎಂದು ಜನರು ಮನೆಯಿಂದ ಹೊರ ಬಂದಿದ್ದಾರೆ. ಗಾಂಧಿ ವೃತ್ತದಿಂದ ಸಿದ್ದೇಶ್ವರ ಮಂದಿರದವರೆಗೂ ರಸ್ತೆ ಜನ ಜಂಗುಳಿಯಿಂದ ಕೂಡಿದ್ದು, ಸಾಮಾಜಿಕ ಅಂತರವನ್ನೇ ಮರೆತು ಜನರು ಒಂದೆಡೆ ಸೇರಿದ್ದು ಕಂಡು ಬಂದಿದೆ.