ETV Bharat / state

ಮನೆ ನಿರ್ಮಾಣಕ್ಕೆ ಕಂಟಕವಾದ ಸಿಮೆಂಟ್​, ಕಬ್ಬಿಣ ದರ ದುಬಾರಿ, ಕೂಲಿ ಕಾರ್ಮಿಕರ ಕೊರತೆ - ವಿಜಯಪುರ ಜಿಲ್ಲೆ ಸುದ್ದಿ

ಕೊರೊನಾ ಭೀತಿಯಿಂದ ತವರಿಗೆ ಮರಳಿರುವ ಕೆಲ ಕಟ್ಟಡ ಕಾರ್ಮಿಕರು ತಮ್ಮ ವೃತ್ತಿಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಕಾರ್ಮಿಕರ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಇನ್ನು ಕೆಲಸಕ್ಕೆ ಬರುವ ಅಲ್ಪಸ್ವಲ್ಪ ಕಾರ್ಮಿಕರು ಕೂಲಿ ಹೆಚ್ಚು ಕೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Lockdown effect on real estate industry in Karnataka
ಮನೆ ನಿರ್ಮಾಣ ಕಾರ್ಯ
author img

By

Published : Dec 7, 2020, 5:13 PM IST

ವಿಜಯಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ (ಸಿಮೆಂಟ್​, ಕಬ್ಬಿಣ...) ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರ ನಿದ್ದೆಗೆಡಿಸಿದೆ. ಜನವರಿಗೆ ಅವಧಿಗೆ ಆರಂಭಗೊಂಡ ಕಟ್ಟಡ ಕಾಮಗಾರಿಗಳು ಡಿಸೆಂಬರ್​ ಬಂದರೂ ಮುಗಿಯುವ ಹಂತಕ್ಕೆ ತಲುಪಿಲ್ಲ.

ಇದನ್ನೂ ಓದಿ...ಏಮ್ಸ್ ಪರೀಕ್ಷೆಯಲ್ಲಿ ವಿಜಯಪುರದ ಯುವತಿ ದೇಶಕ್ಕೆ ಪ್ರಥಮ

ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಸಿಮೆಂಟ್​, ಕಬ್ಬಿಣ, ಇಟ್ಟಿಗೆ, ಮರಳು ಹಾಗೂ ಇತರೆ ಸಾಮಗ್ರಿಗಳ ಬೆಲೆದ ಬೆಲೆ ₹8 ರಿಂದ ₹35 ರವರೆಗೆ ಏರಿಕೆ ಕಂಡಿದೆ. ಅಗತ್ಯ ವಸ್ತುಗಳ ಬೆಲೆ ದುಬಾರಿಯಾದ ಕಾರಣ ಕಟ್ಟಡ ಕಾಮಗಾರಿಗಳನ್ನು ಮುಂದುವರೆಸುವ ಗೋಜಿಗೆ ಹೋಗುತ್ತಿಲ್ಲ.

ಮನೆ ನಿರ್ಮಾಣಕ್ಕೆ ಕಂಟಕವಾದ ಕೂಲಿ ಕಾರ್ಮಿಕರ ಕೊರತೆ

ಇತ್ತ ಬಿಹಾರ, ಯುಪಿ, ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಬಂದಿದ್ದ ಕಟ್ಟಡ ಕಾರ್ಮಿಕರು, ಕೊರೊನಾದಿಂದ ತಮ್ಮ ತಮ್ಮ ಊರುಗಳಿಗೆ ಮರಳಿದವರು ಇನ್ನೂ ಈ ಕಡೆ ಹೆಜ್ಜೆ ಹಾಕಿಲ್ಲ. ಹೀಗಾಗಿ ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ.

ಇದನ್ನೂ ಓದಿ...ಹಳ್ಳಕ್ಕೆ ಕಾರ್ಖಾನೆಯ ಕಲುಷಿತ ನೀರು ಬಿಡದಂತೆ ಆಗ್ರಹಿಸಿ ರಸ್ತೆ ತಡೆ

ನಷ್ಟದಲ್ಲಿರುವ ಗುತ್ತಿಗೆದಾರು: ಗುತ್ತೆದಾರರು ಹೇಳುವ ಪ್ರಕಾರ ₹10 ಲಕ್ಷ ವೆಚ್ಚದಲ್ಲಿ ಮುಗಿಯಬೇಕಾದ ಮನೆಗಳು ₹15 ಲಕ್ಷದವರೆಗೂ ಮುಟ್ಟುವ ಸಾಧ್ಯತೆ ಎನ್ನುತ್ತಿದ್ದಾರೆ. ಹೀಗಾಗಿ, ಗುತ್ತಿಗೆದಾರರು ನಷ್ಟದ ಹಾದಿ ಹಿಡಿಯುವಂತಾಗಿದೆ. ಮನೆ ಮಾಲೀಕರು ಕೂಡ ಮನೆ ಕಟ್ಟಿಸಲು ಇಷ್ಟು ಹಣ ಎಲ್ಲಿಂದ ತರಬೇಕು ಎಂಬ ಚಿಂತೆಯಲ್ಲಿ ತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.