ವಿಜಯಪುರ: ಅವರು ರಟ್ಟು ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರು. ಪುಟ್ಟ ಪುಟ್ಟ ಮಕ್ಕಳಿರುವ ಆ ಏರಿಯಾದಲ್ಲಿ ನಿತ್ಯವೂ ಸಾಂಕ್ರಾಮಿಕ ರೋಗದ ಭೀತಿ, ಇನ್ನೂಂದೆಡೆಗೆ ಸ್ವಲ್ಪ ಮಳೆಯಾದರೂ ಉಳಿಯಲು ಸೂರಿಲ್ಲದೆ ಆ ಕುಟುಂಬಗಳು ಪರಿತಪ್ಪಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಟ್ಟಿನಿಂದ ತಯಾರಿಸಿದ ಮನೆಯಲ್ಲಿ ವಾಸ, ಜೋಪಡಿ ಪಕ್ಕದಲ್ಲಿ ಸಾಂಕ್ರಾಮಿಕ ರೋಗದ ಭೀತಿ, ನಿಂತಿರುವ ನೀರು. ಗುಮ್ಮಟನಗರಿ ವಿಜಯಪುರದ ವಾರ್ಡ್ ನಂ. 34 ರ ಇಬ್ರಾಹಿಂ ರೋಜಾ ಹಿಂಭಾಗದಲ್ಲಿ ಕಂಡು ಬಂದ ದೃಶ್ಯ. ಹಲವು ದಶಕಗಳ (20 ವರ್ಷಗಳಿಂದ) ಹಿಂದೆ ಯುಪಿ ಮೂಲದ ಕುಟುಂಬಗಳು ರಟ್ಟಿನ ವ್ಯಾಪಾರ ಮಾಡಲು ಗುಮ್ಮಟನಗರಿಗೆ ವಲಸೆ ಬಂದಿವೆ. ಕಳೆದ 6 ವರ್ಷಗಳ ಹಿಂದೆ ಜಿಲ್ಲಾಡಳಿತ ರಟ್ಟಿನ ವ್ಯಾಪಾರ ಮಾಡುವ ಕುಟುಂಬಗಳಿಗೆ ಪಡಿತರ ಚೀತಿ, ಆಧಾರ್ ಕಾರ್ಡ್ ಜೊತೆಗೆ ಗುರುತಿನ ಚೀಟಿ ನೀಡಿ ಕರ್ನಾಟಕದ ನಾಗರೀಕರು ಎಂದು ಹಕ್ಕು ನೀಡಿದೆ.
ಆದರೆ ಕುಟುಂಬಗಳು ಜಿಲ್ಲಾಡಳಿತ ವಸತಿ ಹಾಗೂ ಮೂಲ ಸೌಕರ್ಯದಿಂದ ವಂಚಿತರಾಗಿ ಹಲವು ದಿನಗಳಿಂದ ರಟ್ಟಿನಿಂದ ಗೂಡು ಕಟ್ಟಿಕೊಂಡು ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸ ಮಾಡತ್ತಿವೆ. ಈ ಏರಿಯಾದಲ್ಲಿ ನಿತ್ಯವೂ ಸೊಳ್ಳೆಗಳ ಕಾಟವು ಹೆಚ್ಚಾಗಿದೆಯಂತೆ. ಏರಿಯಾದಲ್ಲಿ ಸ್ವಲ್ಪ ಮಳೆ ಬಂದ್ರೆ ಮಕ್ಕಳ ಜೊತೆಗೆ ಗಿಡದ ಕೆಳೆಗೆ ಆಶ್ರಯ ಪಡೆಯುವಂತಾಗಿದೆ. ಇದುವರಿಗೂ ಸರ್ಕಾರ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಜನರು ಆರೋಪ ಮಾಡುತ್ತಿದ್ದಾರೆ.
ಅಂದಹಾಗೇ ಈ ಏರಿಯಾದ ಸುತ್ತಮುತ್ತಲೂ ಹೆಚ್ಚಾಗಿ ತಗ್ಗು ಪ್ರದೇಶವಿರುವುರಿಂದ ಮಳೆ ನೀರು ಮನೆ ಹಿಂಭಾಗದಲ್ಲೆ ಜಮಾವಣೆಗೊಳ್ಳುತ್ತದೆ. ಹೀಗಾಗಿ ಕುಟುಂಬಸ್ಥರು ರಟ್ಟಿನ ವ್ಯಾಪಾರ ಮಾಡಲು ಹೊರಗಡೆ ಹೋದರೆ ದಿನವಿಡಿ ಮಕ್ಕಳು ನೀರಿನಲ್ಲಿ ಆಟವಾಡುವುದರಿಂದ ಮಕ್ಕಳಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇತ್ತ ರಟ್ಟಿನ ವ್ಯಾಪಾರಕ್ಕೆಂದು ಬಂದರು ಕೆಲವರು ಮನೆ ಕಟ್ಟಲು ಜಾಗ ಖರೀದಿ ಮಾಡಿದ್ದಾರೆ. ಇನ್ನೂ ಮೂರು ಕುಟುಂಬಗಳು ಬಾಡಿಗೆ ಜಾಗದಲ್ಲಿರಂತೆ, ಉಳಿಯಲು ರಟ್ಟಿನ ಮನೆಯೇ ಗತಿಯಾಗಿದೆ. ಏರಿಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳು ಮರೆತಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ. ಇತ್ತ ರಟ್ಟಿನ ಮನೆಯಲ್ಲಿ ವಾಸ ಮಾಡುವ ಕುಟುಂಬಳಿಗೂ ಇದುವರಿಗೂ ಜಿಲ್ಲಾಡಳಿತ ವಸತಿ ಸೌಲಭ್ಯ ಕಲ್ಪಿಸಿಲ್ಲವಂತೆ. ಮಳೆಗಾಲದಲ್ಲಿ ಯುಪಿ ಮೂಲದ ಕುಟುಂಬಗಳು ಕಷ್ಟ ಅನುಭವಿಸುತ್ತಿವೆ ಎನ್ನುತ್ತಿದ್ದಾರೆ ಇಲ್ಲಿನ ಸ್ಥಳೀಯರು.
ಒಟ್ಟಿನಲ್ಲಿ ರಟ್ಟಿನ ವ್ಯಾಪಾರ ನಡೆಸುವ ಕುಟುಂಬಗಳು ಮಳೆಗಾಲದಲ್ಲೂ ರಟ್ಟಿನ ಗೂಡು ಗತಿಯಾದರೆ. ಇತ್ತ ಸಾಂಕ್ರಾಮಿಕ ರೋಗಗಳ ಭೀತಿ ಡವಡವ ಶುರುವಾಗಿದ್ದು, ಇನ್ನಾದರೂ ಅಧಿಕಾರಿಗಳು ಈ ಕುಟುಂಬಗಳ ನೆರವಿಗೆ ಧಾವಿಸಬೇಕಿದೆ.