ETV Bharat / state

ಬಬಲಾದಿ ಸದಾಶಿವನ ಜಾತ್ರೆ: ಇಲ್ಲಿ ದೇವರಿಗೆ ಮದ್ಯವೇ ನೈವೇದ್ಯ - ದೇವರಿಗೆ ಮದ್ಯವನ್ನೇ ನೈವೇದ್ಯವಾಗಿ ಆರ್ಪಿಸಿ ಭಕ್ತರು

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಬಬಲಾದಿ ಸದಾಶಿವನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ ದೇವರಿಗೆ ಮದ್ಯವನ್ನೇ ನೈವೇದ್ಯವಾಗಿ ಆರ್ಪಿಸಿ ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ.

sadashiva fair
ಅದ್ಧೂರಿಯಾಗಿ ನಡೆಯುತ್ತಿರುವ ಬಬಲಾದಿ ಸದಾಶಿವನ ಜಾತ್ರೆ
author img

By

Published : Feb 22, 2023, 12:00 PM IST

Updated : Feb 22, 2023, 12:59 PM IST

ಅದ್ಧೂರಿಯಾಗಿ ನಡೆಯುತ್ತಿರುವ ಬಬಲಾದಿ ಸದಾಶಿವನ ಜಾತ್ರೆ

ವಿಜಯಪುರ: ದೇವರಿಗೆ ನೈವೇದ್ಯವಾಗಿ ಭಕ್ತರು, ಹೂ, ಹಣ್ಣು, ಆಹಾರ ಪದಾರ್ಥ ನೀಡುವುದನ್ನು ನಾವೆಲ್ಲಾ ಸಾಮಾನ್ಯವಾಗಿ ನೋಡಿದ್ದೇವೆ. ಆದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತದೆ. ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರು ಸಹ ಮದ್ಯ ಸೇವನೆ ಮಾಡುತ್ತಾರೆ.

ಹೌದು, ತಲ-ತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಬಬಲಾದಿ ಸದಾಶಿವನ ಜಾತ್ರೆಯಲ್ಲಿ ಮದ್ಯವೇ ನೈವೇದ್ಯವಾಗಿರುತ್ತದೆ. ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನು ಸಮರ್ಪಿಸಲಾಗುತ್ತದೆ. ಹೀಗಾಗಿ, ಈ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಹೇಳಲಾಗುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ. ಮಹಿಳೆಯರು ಕೂಡಾ ಇದನ್ನೇ ನೈವೇದ್ಯವಾಗಿ ಸ್ವೀಕರಿಸಿತ್ತಾರೆ.

ಬೇಡಿಕೆ ಈಡೇರಿದ್ರೆ ತಮ್ಮ ಹರಕೆಯಂತೆ ವಿವಿಧ ಬ್ರಾಂಡ್​ಗಳ ಮದ್ಯ ಅರ್ಪಣೆ.. ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ. ವರ್ಷದ ಮಳೆ, ಬೆಳೆಗಳ ಬಗ್ಗೆ ಬಹುತೇಕ ನಿಖರವಾಗಿ ಹೇಳಿಕೆ ನೀಡುವುದರಿಂದ ರೈತರು ಇದೇ ಹೇಳಿಕೆಯನ್ನ ಆಧರಿಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸದಾಶಿವನ ಸನ್ನಿಧಾನಕ್ಕೆ ಆಗಮಿಸಿ ಯಾವುದಾದ್ರು ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಈಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್​ಗಳ ಮದ್ಯವನ್ನ ದೇವರಿಗೆ ಸಮರ್ಪಿಸುತ್ತಾರೆ.

ಇದನ್ನೂ ಓದಿ: ಗ್ರಾಮದೇವಿ ಜಾತ್ರೆಗಾಗಿ ಊರು ತೊರೆಯುವ ಜನ.. ರಾಜ್ಯದ ಜನರ ಗಮನ ಸೆಳೆಯುತ್ತೆ ಈ ಹೊರವಾರ ಆಚರಣೆ

ರೈತರಿಗೆ ಬೊಗಸೆಯಷ್ಟು ಧವಸ ಧಾನ್ಯ.. ವಿಶೇಷ ಅಂದ್ರೆ, ಜಾತ್ರೆ ವೇಳೆ ದೇವಸ್ಥಾನದ ಆವರಣದಲ್ಲಿ ಪ್ರತಿ ರೈತನಿಗೂ ಬೊಗಸೆಯಷ್ಟು ಧವಸ-ಧಾನ್ಯಗಳನ್ನು ನೀಡಲಾಗುತ್ತದೆ. ಈ ಧಾನ್ಯವನ್ನು ರೈತರು ತಾವು ಬಿತ್ತನೆ ಮಾಡುವ ಬೀಜದೊಂದಿಗೆ ಸೇರಿಸಿ ಹಾಕಿದ್ರೆ ಆ ವರ್ಷದ ಬೆಳೆ ಭರ್ಜರಿಯಾಗಿ ಬರುತ್ತದಂತೆ. ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಕರ್ನಾಟಕ - ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಐದು ದಿನಗಳ ವರೆಗೆ ನಡೆಯುವ ಜಾತ್ರೆ ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿರುತ್ತದೆ. ಸರದಿ ಸಾಲಿನಲ್ಲಿ ನಿಂತ ಭಕ್ತರು, ಮುತ್ಯಾನ ಪ್ರತಿಮೆಗೆ ಸಾರಾಯಿ ನೈವೇದ್ಯ ಅರ್ಪಿಸಿ, ತಮ್ಮ ಹರಕೆಗಳನ್ನು ಸಲ್ಲಿಸಿದರು.‌

ಇದನ್ನೂ ಓದಿ: ಒಂದೇ ದಿನದಲ್ಲಿ 120 ಕಿ.ಮೀ ಕ್ರಮಿಸಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಬಂದ ಚಕ್ಕಡಿ: ಗ್ರಾಮದಲ್ಲಿ ಅದ್ಧೂರಿ ಸ್ವಾಗತ

ಜಾತ್ರೆಗೆ ಹರಿದು ಬಂದ ಭಕ್ತರು: ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದ ಬಬಲಾದಿ ಜಾತ್ರೆ, ಈ ಬಾರಿ ಕಳೆಗುಂದಿತ್ತು. ಸಾವಿರಾರು ಭಕ್ತರು ವಿವಿಧ ವಾಹನಗಳು, ಬೈಕ್​ಗಳ ಮೂಲಕ ಜಾತ್ರೆಗೆ ಆಗಮಿಸುತ್ತಿದ್ದಾರೆ. ಅಧಿಕ ಭಕ್ತರು ಆಗಮಿಸುತ್ತಿರುವ ಕಾರಣ ಭದ್ರತೆಗಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ-ವಿಡಿಯೋ

Last Updated : Feb 22, 2023, 12:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.