ವಿಜಯಪುರ: ಐತಿಹಾಸಿಕ ಗುಮ್ಮಟನಗರಿಯಲ್ಲಿ ಅವ್ಯವಹಾತವಾಗಿ ಗಾಂಜಾ ಮಾರಾಟವಾಗುತ್ತಿದೆ ಈ ಮಾದಕ ಪದಾರ್ಥದ ಮಾರಾಟಕ್ಕೆ ಬ್ರೇಕ್ ಹಾಕಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆ ಮಾಜಿ ಕಾರ್ಪೊಟರ್ ಪ್ರಕಾಶ ಎಸ್. ಮಿರ್ಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ವಿಜಯಪುರ ನಗರದ ಹರಣಶಿಕಾರಿಗಲ್ಲಿ, ಜುಮ್ಮಾ ಮಸೀದಿ, ಜೈಲ್ ದರ್ಗಾದ ಹತ್ತಿರ ಇರುವ ಬಾಟರ್ ಗಲ್ಲಿ, ಜೋಳದ ಬಜಾರ ಹಾಗೂ ನವಬಾಗ ಗಲ್ಲಿ ಸೇರಿದಂತೆ ಹಲವೆಡೆ ಗಾಂಜಾ ಮಾರಾಟವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗಾಂಜಾ ಮಾಫಿಯಾ ತಡೆಯುವ ಕುರಿತು ಎಸ್ಪಿಯವರಿಗೆ ಮನವಿ ಮಾಡಲಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ ತಕ್ಷಣವೇ ವಿಜಯಪುರ ಪೊಲಿಸರಿಗೆ ಗಾಂಜಾ ಮಾರಾಟ ತಡೆಯುವಂತೆ ನಿರ್ದೇಶನ ನೀಡುವಂತೆ ಪ್ರಕಾಶ ಮಿರ್ಜಿ ಮನವಿಯಲ್ಲಿ ಬರೆದುಕೊಂಡಿದ್ದಾರೆ.
ಮನವಿ ಸಿಎಂ ಕಚೇರಿಯಲ್ಲಿ ಸ್ವೀಕೃತಿ ಆಗಿದ್ದು ಮುಂದಿನ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗಿದೆ ಎಂಬ ಮೊಬೈಲ್ ಸಂದೇಶ ಕೂಡಾ ಬಂದಿದೆ.