ETV Bharat / state

ಕೂಲಿ ಕೆಲಸಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಪತ್ರ

author img

By

Published : Aug 26, 2020, 10:00 AM IST

2019-20 ನೇ ಸಾಲಿನ ತೊಗರಿ ತುಂಬುವ ವೇಳೆ ಕೂಲಿ ಕೆಲಸಗಾರರಿಗೆ ಕೊಡಬೇಕಾದ ಹಣಕ್ಕಿಂತ ಹೆಚ್ಚಿನ ಹಣ ಪಾವತಿಸಿದ್ದು, ಅದನ್ನು ವಾಪಸ್ ಕೊಡಿಸುವಂತೆ ಕೋರಿ ಪೊಲೀಸರಿಗೆ ಪತ್ರ ಬರೆಯಲಾಗಿದೆ.

Muddebihal
Muddebihal

ಮುದ್ದೇಬಿಹಾಳ: ತಾಲೂಕಿನ ರಕ್ಕಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2019-20 ನೇ ಸಾಲಿನ ತೊಗರಿ ತುಂಬುವ ವೇಳೆ ಹಮಾಲರಿಗೆ ( ಕೂಲಿ ಕೆಲಸಗಾರರಿಗೆ) ಕೊಡಬೇಕಾದ ಹಣಕ್ಕಿಂತ ಹೆಚ್ಚಿನ ಹಣ ಪಾವತಿಸಿದ್ದು, ಅದನ್ನು ವಾಪಸ್ ಕೊಡಿಸುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಿದ್ಧಣ್ಣ ತುರುಡಗಿ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಪೊಲೀಸ್‌ರಿಗೆ ಬರೆದಿರುವ ಪತ್ರದಲ್ಲಿ, ನಮ್ಮ ಸಂಘದ ಮುಖಾಂತರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಯಮಿತ ವಿಜಯಪುರ ಇವರ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಿ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಸರ್ಕಾರದಿಂದ 100 ಕೆ.ಜಿ ಗೆ 25 ರೂಪಾಯಿಗಳಂತೆ ಹಣ ಬಿಡುಗಡೆ ಆಗುತ್ತದೆ ಎಂದು ನಮ್ಮ ಸಂಘದಿಂದ 100 ಕೆ.ಜಿಗೆ 25 ರಂತೆ 2,913 ಕೆ.ಜಿ ತೊಗರಿ ಖರೀದಿಸಿ, ಅದನ್ನು ಕೂಲಿ ಕೆಲಸಗಾರರ ಮೂಲಕ ತುಂಬಿಸಲಾಗಿದೆ. ಒಟ್ಟು 72,825 ರೂಪಾಯಿಗಳನ್ನು ಮುತ್ತಪ್ಪ ಮಡಿವಾಳ ಇವರ ರುಜುವಾತಿನೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ, ಸರ್ಕಾರ 100 ಕೆ.ಜಿಗೆ 10 ರೂ. ದಂತೆ 29,130 ರೂ. ಬಿಡುಗಡೆ ಮಾಡಿದ್ದು, ನಾವು ನೀಡಿರುವ ಹೆಚ್ಚುವರಿ ಹಣವನ್ನು ಹಮಾಲರಿಂದ ಮರಳಿ ಕೊಡುವಂತೆ ಕೇಳಿದಾಗ ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮುತ್ತಪ್ಪ ಮಡಿವಾಳರ ಹಾಗೂ ಅವರ ಸಂಗಡಿಗರ ಮೇಲೆ ಕ್ರಮ ಕೈಗೊಂಡು ಸಂಘಕ್ಕೆ ಬರಬೇಕಾದ ಮೊತ್ತವನ್ನು ಜಮಾ ಮಾಡಿಸಬೇಕಾಗಿ ಪೊಲೀಸರಲ್ಲಿ ವಿನಂತಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.